ಶ್ರೀಮಂಗಲ, ಫೆ. ೧೨ : ಕೊಡವರು ಭೂಮಿ ಹಾಗೂ ಪ್ರಕೃತಿಯೊಂದಿಗೆೆ ತನ್ನ ಸಂಬAಧವನ್ನು ಕಡಿದುಕೊಂಡು ದೂರವಾದಂತೆಲ್ಲಾ ಮಾನವೀಯ ಮೌಲ್ಯವನ್ನು ಕಳೆದುಕೊಂಡು ಮೌಡ್ಯತೆಯಡೆಗೆ ಸಾಗುತ್ತಾನೆ. ಇದರಿಂದ ತನ್ನ ಭೌತಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟನ್ನು ಕಳೆದುಕೊಂಡು ವಿನಾಶದೆಡೆಗೆ ಸಂಚರಿಸುವAತಾಗಿದೆ. ಕೊಡವರ ಅಸ್ತಿತ್ವವವನ್ನು ಉಳಿಸಿ ಬೆಳೆಸುವ ದೃಷ್ಠಿಯಿಂದ, ಆಧುನಿಕತೆಯ ಭರಾಟೆಯಲ್ಲಿ ಗತಕಾಲದ ಮಹತ್ವವನ್ನು ಕಳೆದುಕೊಂಡಿದ್ದ ಕೊಡವರ ಹಾಗೂ ಭೂಮಿಯ ನಡುವಿನ ಭಾವನಾತ್ಮಕ ಬೆಸುಗೆಯ ಪಾರಂಪರಿಕ ಆಚರಣೆಯಾದ “ಬೇದ ಚಂಗ್ರಾAದಿ” ಹಬ್ಬವನ್ನು ಯುನೈಟೆಡ್ ಕೊಡವ ಅರ್ಗನೈಸೇಷನ್ ಸಂಘಟನೆ ಯ ವತಿಯಿಂದ ಸಾಮೂಹಿಕವಾಗಿ ಆಚರಿಸಲಾಗುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪೇರೂರು ಗ್ರಾಮದ ತಾಪಂಡ ಕುಟುಂಬದ ಐನ್‌ಮನೆಯಲ್ಲಿ ಯುಕೊ ಸಂಘಟನೆಯ ವತಿಯಿಂದ ನಡೆದ ೨ನೇ ವರ್ಷದ ಬೇದ ಚಂಗ್ರಾAದಿ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು ಮೂಲತಃ ಭತ್ತದ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಕೊಡವರು ಭೂಮಿ ಯೊಂದಿಗೆ ಅತ್ಯಂತ ಭಾವನಾತ್ಮಕ ಸಂಬAಧವನ್ನು ಹೊಂದಿದ್ದರು. ಕಾಲಾಂತರದಲ್ಲಿ ಆಧುನಿಕತೆಯ ಪ್ರಭಾವ, ಸ್ಥಿತ್ಯಂತರದ ಹೊಡೆತಕ್ಕೆ ಸಿಲುಕಿ ಕೊಡವರು ಭತ್ತದ ಕೃಷಿಯನ್ನು ಕಡೆಗಣಿಸಿ ವ್ಯವಹಾರಿಕ ಬೆಳೆಯಾದ ಕಾಫಿಯನ್ನು ಅವಲಂಭಿತರಾಗ ತೊಡಗಿದಾಗ ಭೂಮಿಯೆಡೆಗಿನ ಭಾವನಾತ್ಮಕ ಸಂಬAಧಗಳು ಹಂತ ಹಂತವಾಗಿ ತನ್ನ ಬೆಸುಗೆಯನ್ನು ಕಳಚಿಕೊಳ್ಳತೊಡಗಿದವು. ಈ ಹಿನ್ನೆಲೆಯಲ್ಲಿ ಬೆÉÃದಚಂಗ್ರಾAದಿಯೆAಬ ಭಾವನಾತ್ಮಕ ಆಚರಣೆಯೂ ಸಹ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗಿ ನಿಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ತನ್ನ ಬದುಕನ್ನೇ ಕೃಷಿಯೊಂದಿಗೆ ಅರ್ಪಿಸಿಕೊಂಡಿರುವ ಕೊಡವರ ಸಾಂಪ್ರದಾಯಿಕ ೬ ಹಬ್ಬಗಳಲ್ಲಿ ಒಂದಾದ ಮೊದಲನೆಯ ಹಬ್ಬ ಬೆÉÃದಚಂಗ್ರಾAದಿಯನ್ನು ಇಂದು ಅರ್ಥಪೂರ್ಣವಾಗಿ ಪಾರಂಪಾರಿಕ ವಾಗಿ ಆಚರಿಸಲು ಯುಕೋ ಸಂಘಟನೆಯು ಮುಂದಾಗಿದೆ ಎಂದು ಅವರು ತಿಳಿಸಿದರು.

ಪ್ರತಿಯೊಬ್ಬರಿಗೂ ಹಾಗೂ ಪ್ರತಿಯೊಂದು ಜನಾಂಗ ಜಾತಿಗಳಿಗೂ ಸಹ ತಮ್ಮದೇ ಆದ ಪದ್ಧತಿ ಪರಂಪರೆಗಳು ಇದ್ದು, ಅದನ್ನು ಅವರು ಗೌರವಯುತವಾಗಿ ಕಾಣಬೇಕಾಗಿದೆ. ತಮ್ಮ ಮೂಲ ಸಂಸ್ಕೃತಿಯತ್ತ ತಾವೇ ಕೀಳರಿಮೆ ಬೆಳಸಿಕೊಂಡು ಮತ್ತೊಂದು ಸಂಸ್ಕೃತಿಯ ಅನುಕರಣೆಯಿಂದ ತಮ್ಮ ಸ್ವಂತಿಕೆಯನ್ನು ಕಳೆದು ಕೊಳ್ಳುವಂತಾಗುತ್ತದೆ. ಇದರಿಂದ ಮೂಲ ಸಂಸ್ಕೃತಿಯನ್ನು ಅನುಸÀರಣೆ ಮಾಡದೆ, ಇತ್ತ ಅನುಕರಣೆ ಮಾಡಿದ ಸಂಸ್ಕೃತಿಯು ತನ್ನದಾಗದೆ ಅಂತಹ ಜನಾಂಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂದು ಅವರು ನುಡಿದರು.

ಅತಿಥಿಯಾಗಿ ಭಾಗವಹಿಸಿದ್ದ ಬಲ್ಲತ್‌ನಾಡ್‌ನ ಹಿರಿಯರೂ, ಸಮಾಜ ಸೇವಕರೂ ಆದ ನಿವೃತ ಶಿಕ್ಷಕ ಚಿರೋಟಿರ ತಮ್ಮಯ್ಯ ಅವರು ಮಾತನಾಡಿ ಕೊಡವರು ಅನಾಧಿ ಕಾಲದಿಂದಲೂ ಸೂರ್ಯ, ಚಂದ್ರ ಹಾಗೂ ಭೂಮಿಯನ್ನು ಪೂಜಿಸಿ ಕೊಂಡು ಬಂದವರಾಗಿದ್ದಾರೆ. ಸೂರ್ಯ ಹಾಗೂ ಚಂದ್ರರನ್ನು ಪೂಜಿಸುವುದು ಒಂದು ರೀತಿಯ ದಾದರೆ ಭೂಮಿಯನ್ನು ತಾಯಿಯ ಕೊಳ್ಳುವಂತಾಗುತ್ತದೆ. ಇದರಿಂದ ಮೂಲ ಸಂಸ್ಕೃತಿಯನ್ನು ಅನುಸÀರಣೆ ಮಾಡದೆ, ಇತ್ತ ಅನುಕರಣೆ ಮಾಡಿದ ಸಂಸ್ಕೃತಿಯು ತನ್ನದಾಗದೆ ಅಂತಹ ಜನಾಂಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ ಎಂದು ಅವರು ನುಡಿದರು.

ಅತಿಥಿಯಾಗಿ ಭಾಗವಹಿಸಿದ್ದ ಬಲ್ಲತ್‌ನಾಡ್‌ನ ಹಿರಿಯರೂ, ಸಮಾಜ ಸೇವಕರೂ ಆದ ನಿವೃತ ಶಿಕ್ಷಕ ಚಿರೋಟಿರ ತಮ್ಮಯ್ಯ ಅವರು ಮಾತನಾಡಿ ಕೊಡವರು ಅನಾಧಿ ಕಾಲದಿಂದಲೂ ಸೂರ್ಯ, ಚಂದ್ರ ಹಾಗೂ ಭೂಮಿಯನ್ನು ಪೂಜಿಸಿ ಕೊಂಡು ಬಂದವರಾಗಿದ್ದಾರೆ. ಸೂರ್ಯ ಹಾಗೂ ಚಂದ್ರರನ್ನು ಪೂಜಿಸುವುದು ಒಂದು ರೀತಿಯ ದಾದರೆ ಭೂಮಿಯನ್ನು ತಾಯಿಯ ಬಾಚಣಿಕೆ ಹಾಗೂ ಮಿಳ್ಳಿಯಲ್ಲಿ ನೀರನಿಟ್ಟು ಪೂಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂಡ ಪಟ್ಟೆದಾರರಾದ ಕರುಂಬಯ್ಯ ನವರು ವಹಿಸಿದ್ದರು. ವೇದಿಕೆಯಲ್ಲಿ ಸಂಘಟನೆಯ “ನಾಡ ಮಣ್ಣ್ ನಾಡ್ ಕೂಳ್” ಯೋಜನಾ ನಿರ್ದೇಶಕಾರ ಚೆಪ್ಪುಡೀರ ಸುಜುಕರುಂಬಯ್ಯ, ಮದ್ರೀರ ಪ್ರಿನ್ಸ್, ಅಪ್ಪಚ್ಚಿರ ನಂದ, ಅಪ್ಪುಮಣಿಯಂಡ ಡೇಸಿ, ಮೂವೇರ ರೇಖಾ ಪ್ರಕಾಶ್, ತಾಪಂಡ ಸುರೇಶ್, ಲೀಲಾವತಿಚಿಣ್ಣಪ್ಪ, ಮೀನಾಕ್ಷಿಅಪ್ಪಣ್ಣ ಉಪಸ್ಥಿತರಿದ್ದರು. ತಾಪಂಡ ಅಪ್ಪಣ್ಣ ಸ್ವಾಗತಿಸಿ ಅಯ್ಯಪ್ಪ ವಂದಿಸಿದರು.

ಈ ಸಂದರ್ಭ ತಾಪಂಡ ಕುಟುಂಬಸ್ಥರಾದ ವರುಣ್‌ಸುಬ್ಬಯ್ಯ, ಕಾರ್ಯಪ್ಪ, ಭೀಮಯ್ಯ, ತಿಮ್ಮಯ್ಯ, ನಾಗೇಶ್, ಗಣೇಶ್, ವೀಣಾತಿಮ್ಮಯ್ಯ, ಮೀರಾ ತಮ್ಮಯ್ಯ, ಜಾನಕಿಕರುಂಬಯ್ಯ, ವಿಸುಬೋಪಣ್ಣ, ಮುತ್ತಣ್ಣ, ಸುಶೀಲಗಣೇಶ್, ಶಾಂತಿ, ಮುತ್ತಪ್ಪ, ಬೊಟ್ಟೋಳಂಡ ಡಾಟಿ, ದಕ್ಷ, ಮೂವೇರ ನಾಣಪ್ಪ, ಕಾಳಪ್ಪ, ಪೆಮ್ಮಯ್ಯ, ವಿನು, ಮುತ್ತಣ್ಣ, ಮಚ್ಚುರ ರವೀಂದ್ರ, ಪಾಲೆಯಡ ದೇವಯ್ಯ, ಅಯ್ಯಪ್ಪ, ತೋಲಂಡ ಪೂಣಚ್ಚ, ಚಂಗೇಟಿರ ಸೋಮಣ್ಣ, ಕರವಂಡ ರವಿ, ಚಂಗೇಟಿರ ಕುಶಾಲಪ್ಪ, ತಾಪಂ ಮುತ್ತಪ್ಪ, ಮೇಕ್‌ಮಣಿಯಂಡ ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.