ವೀರಾಜಪೇಟೆ, ಫೆ. ೧೨: ಸಮೀಪದ ಬಿಟ್ಟಂಗಾಲದ ನವೋದಯ ಫ್ರೆಂಡ್ಸ್ ವತಿಯಿಂದ ನಡೆದ ಮೊದಲ ವರ್ಷದ ಬಿಟ್ಟಂಗಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೈಸಿಂಗ್ ಸ್ಟಾರ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.

ಬಿಟ್ಟಂಗಾಲದ ನಾಂಗಾಲ ಮೈದಾನದಲ್ಲಿ ಇತ್ತೀಚೆಗೆ ನಡೆದ ಅಂತಿಮ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ ತಂಡ ಬ್ಲಾö್ಯಕ್ ಪ್ಯಾಂರ‍್ಸ್ ತಂಡವನ್ನು ೩೦ ರನ್‌ಗಳಿಂದ ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೈಸಿಂಗ್ ಸ್ಟಾರ್ ತಂಡ ಶಮೀರ್ ಅವರ ಉತ್ತಮ ಬ್ಯಾಟಿಂಗ್‌ನಿAದ ೯೦ ರನ್‌ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ೯೧ ರನ್‌ಗಳ ಗುರಿ ಬೆನ್ನತ್ತಿದ ಬ್ಲಾö್ಯಕ್ ಪ್ಯಾಂರ‍್ಸ್ ತಂಡ ೬೦ ರನ್ ಗಳಿಸಲಷ್ಟೆ ಶಕ್ತವಾಯಿತು.

ಐಪಿಎಲ್ ಮಾದರಿಯ ಲೀಗ್ ಪಂದ್ಯಾಟದಲ್ಲಿ ೫ ತಂಡಗಳು ಭಾಗವಹಿಸಿದ್ದವು. ರೈಸಿಂಗ್ ಸ್ಟಾರ್ ತಂಡದ ಶಮೀರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರೆ, ವಾರ್ ಈಗಲ್ಸ್ ತಂಡದ ನಿಖಿಲ್ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಟೂರ್ನಿಯ ತೀರ್ಪುಗಾರರಾಗಿ ಅಜಿತ್, ಅಂಕಿತ್ ಹಾಗೂ ರಚನ್ ಪೂಜಾರಿ ನಿರ್ವಹಿಸಿದರೆ, ತೌಫೀಕ್ ಅಹ್ಮದ್ ವೀಕ್ಷಕ ವಿವರಣೆಯನ್ನು ನೀಡಿದರು.

ಸಮಾರೋಪ ಸಮಾರಂಭದಲ್ಲಿ ಬಿಟ್ಟಂಗಾಲ ಪಂಚಾಯಿತಿಯ ಸದಸ್ಯರಾದ ಬಡಕಡ ಗಣೇಶ್, ಪದ್ಮ ಭೀಮಯ್ಯ, ಮೀನಾ ಕುಶಾಲಪ್ಪ, ನವೀನ್, ಕಿಶಾ ಕುಶಾಲಪ್ಪ, ರತನ್, ಶಾರದಾ, ರಮ್ಯ, ಬಡಕಂಡ ಲಾಲು, ನವೋದಯ ಸಂಘದ ಪದಾಧಿಕಾರಿಗಳು ಹಾಜರಿದ್ದರು.