ಮಡಿಕೇರಿ, ಫೆ.೧೨: ನವದೆಹಲಿಯ ರಾಜಪಥ್‌ನಲ್ಲಿ ಜನವರಿ ೨೬ ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ವು ತಾ. ೧೩ ರಂದು (ಇಂದು) ಬೆಳಗ್ಗೆ ೧೧ ಗಂಟೆಗೆ ನಗರದ ಎನ್‌ಸಿಸಿ ಕಚೇರಿಯಲ್ಲಿ (ಆರ್ಮಿ ಕ್ಯಾಂಟಿನ್ ಬಳಿ) ನಡೆಯಲಿದೆ ಎಂದು ಎನ್‌ಸಿಸಿ ಅಧಿಕಾರಿ ರಾಘವ ಅವರು ತಿಳಿಸಿದ್ದಾರೆ.