ಫೆ. ೧೪ ಇಡೀ ವಿಶ್ವವೇ ಪ್ರೇಮಿಗಳ ದಿನ ಆಚರಿಸುವ ಸಂದರ್ಭದಲ್ಲಿ ನಮ್ಮ ದೇಶ ಭಾರತದಲ್ಲಿ ದೇಶದ ಬೆಚ್ಚಿ ಬೀಳಿಸುವಂತಹ, ಎದೆ ನಡುಗಿಸುವಂತಹ ಹೃದಯವಿದ್ರಾವಕ ಘಟನೆಯು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರ ರಾಷ್ಟಿçÃಯ ಹೆದ್ದಾರಿ ೪೪ರಲ್ಲಿ ಸಂಭವಿಸಿತ್ತು.

ಶ್ರೀನಗರದಿAದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಅವಂತಿಪುರ ಎಂಬ ಸ್ಥಳದಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಹೊರಟ ೭೮ ಸಿಆರ್‌ಪಿಎಫ್ ಯೋಧರು ಇರುವ ವಾಹನಕ್ಕೆ ಶ್ರೀನಗರದಿಂದ ಬಂದ ಉಗ್ರ ತನ್ನ ಸ್ಕಾರ್ಪಿಯೋ ಕಾರ್‌ನಲ್ಲಿ ೮೦ ಕೆಜಿ ಆರ್ಡಿಎಕ್ಸ್ ಬಾಂಬ್ ಇಟ್ಟು ಭಾರತದ ಯೋಧರ ವಾಹನವನ್ನು ಟಾರ್ಗೆಟ್ ಮಾಡುತ್ತಾ ಮಧ್ಯಾಹ್ನದ ಹೊತ್ತಿಗೆ ಯೋಧರ ಬಸ್ಸಿಗೆ ಡಿಕ್ಕಿ ಹೊಡೆದು ಬಾಂಬನ್ನು ಸ್ಫೋಟಿಸುತ್ತ ಭಾರತ ದೇಶದ ಹೆಮ್ಮೆಯ ವೀರ ಪುತ್ರರ ಮಾರಣ ಹೋಮಗೈದು ಹಿಮಪಾತ ನಾಡಲ್ಲಿ ರಕ್ತಪಾತವಾಗಿತ್ತು. ಈ ಒಂದು ಘಟನೆ ಯಾರೂ ನಿರೀಕ್ಷಿಸಿರಲಿಲ್ಲ; ಅಷ್ಟೊಂದು ದೊಡ್ಡಮಟ್ಟದ ದುರಂತ ನಡೆಯಿತು.

ಸ್ಫೋಟಕದ ತೀವ್ರತೆಯಿಂದ ಬೃಹತ್ ಮಟ್ಟದ ಶಬ್ದವು ಅಪ್ಪಳಿಸಿ ರಸ್ತೆಯ ಪಕ್ಕದಲ್ಲಿರುವ ಅಂಗಡಿ-ಮುAಗಟ್ಟುಗಳು, ಮನೆಗಳಿಗೆ ಹಾನಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು.

ಈ ಒಂದು ಘಟನೆಯಿಂದ ದೇಶದಲ್ಲಿ ಸೂತಕದ ಛಾಯೆ ಆವರಿಸಿ ಭಾರತಾಂಬೆಯ ಮಕ್ಕಳ ವೀರ ಮರಣವು ದೇಶಕ್ಕೆ ದೇಶವೇ ಕಣ್ಣೀರ ಸಾಗರದಲ್ಲಿ ಮುಳುಗಿಸಿ ಕಣ್ಣಿಗೆ ಕಗ್ಗತ್ತಲು ಆವರಿಸಿದ ದಿನವಾಗಿದೆ.

ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ಹುತಾತ್ಮರಲ್ಲಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ಯೋಧ ಸಹ ಹುತಾತ್ಮರಾಗಿದ್ದಾರೆ.

ಈ ಒಂದು ಹೀನಾಯ ಕೃತ್ಯವನ್ನು ಜೈಶ್ ಸಂಘಟನೆ ಉಗ್ರ ನಡೆಸಿದ ಕೃತ್ಯವಾಗಿದೆ. ಉಗ್ರನ ಹೀನಾಯ ಕೃತ್ಯಕ್ಕೆ ಭಾರತ ದೇಶದ ಹೆಮ್ಮೆಯ ೪೦ ವೀರಪುತ್ರರು ಹುತಾತ್ಮರಾಗಿದ್ದಾರೆ. ಈ ದಾಳಿಗೆ ಪ್ರತ್ಯುತ್ತರವಾಗಿ ಜೈಶ್ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಕೋಟ್ಯಂತರ ಭಾರತೀಯರ ಹೃದಯದಲ್ಲಿ ಮರೆಯಲಾಗದ ದಿನವಾಗಿದೆ ಫೆಬ್ರವರಿ ೧೪, ೨೦೧೯.

ಮುಂದೆ ಇಂತಹ ಒಂದು ಹೀನಾಯ ಕೃತ್ಯ ದೇಶದಲ್ಲಿ ನಡೆಯದಿರಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ...

-ನೌಫಲ್ ಕಡಂಗ