ಕೂಡಿಗೆ, ಫೆ. ೧೧: ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮೊದಲ ಹಂತದ ಚುನಾವಣೆಯು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ಎಸ್.ಹೆಚ್. ಮಂಜುನಾಥ ಮತ್ತು ಉಪಾಧ್ಯಕ್ಷರಾಗಿ ಅರುಣಕುಮಾರಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಕುಶಾಲನಗರ ಆರ್ಎಂಸಿ ಕಾರ್ಯದರ್ಶಿ ಶ್ರೀಧರ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಕಾರ್ಯ ನಿರ್ವಹಿಸಿದರು. ವಿಜೇತರು ಹೆಬ್ಬಾಲೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಂಭ್ರಮ ಆಚರಣೆ ನಡೆಸಿದರು.