ಪೊನ್ನಂಪೇಟೆ, ಫೆ. ೧೧: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ನೂತನ ಸಾಲಿನ ಅಧ್ಯಕ್ಷರಾಗಿ ಹೆಚ್.ಎಲ್. ಶೈಲಾ, ಉಪಾಧಕ್ಷರಾಗಿ ಪಿ.ಎಸ್. ಸುಮಿತ್ರ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಚುನಾವಣಾಧಿಕಾರಿ ಗುರುಶಾಂತಪ್ಪ ಕಾರ್ಯ ನಿರ್ವಹಿಸಿದರು.

ಈ ಸಂದರ್ಭ ನೂತನವಾಗಿ ಆಯ್ಕೆಯಾದ ಸದಸ್ಯರುಗಳಾದ ಆಲೆಮಾಡ ನವೀನ್, ಕೊಟ್ಟಂಗಡ ಅಯ್ಯಪ್ಪ, ಪೆಮ್ಮಂಡ ಭರತ್, ದೇಯಂಡ ಪಿ. ಜಯಂತಿ, ಮುದ್ದಿಯಡ ಶೀಲಾ ಕಿಶೋರ್, ಪಣಿಯರವರ ಕೆಂಬಿ ಸೂರಿ ಮತ್ತು ಪಣಿಯರವರ ಜಾನು ಇನ್ನಿತರರು ಹಾಜರಿದ್ದರು.