ಸುಂಟಿಕೊಪ್ಪ, ಫೆ. ೧೧: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಿವಮ್ಮ ಮಹೇಶ್ ಅಧ್ಯಕ್ಷೆಯಾಗಿ ಆಯ್ಕೆ ಯಾಗಿದ್ದಾರೆ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಪ್ರಸಾದ್ ಕುಟ್ಟಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಹಾಗೂ ಬಿಜೆಪಿ ಬೆಂಬಲಿತರಾದ ವಸಂತಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಜೆಡಿಎಸ್ ಬೆಂಬಲಿತ ಪ್ರಸಾದ್ ಕುಟ್ಟಪ್ಪ, ಜೆಡಿಎಸ್ ಬೆಂಬಲಿತರಾದ ಜಿನಾಸುದ್ದೀನ್ ಬಿಜೆಪಿ ಬೆಂಬಲಿತ ಬಿ.ಎಂ. ಸುರೇಶ್ ಪುಟ್ಟ ಉಮೇದುವಾರಿಕೆ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಜೆಡಿಎಸ್ ಬೆಂಬಲಿತ ಜಿನಾಸುದ್ದೀನ್ ನಾಮಪತ್ರ ಹಿಂಪಡೆದುಕೊAಡರು.
೨೦ ಸದಸ್ಯರ ಬಲವಿರುವ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮ್ಮ ಮಹೇಶ್ ೧೨ ಮತಗಳು ಪ್ರತಿಸ್ಪರ್ಧಿ ವಸಂತಿಯವರಿಗೆ ೮ ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಸಾದ್ ಕುಟ್ಟಪ್ಪ ಅವರಿಗೆ ೧೨ ಮತಗಳು ದೊರೆತಿದ್ದು ಪ್ರತಿ ಸ್ಪರ್ಧಿ ಬಿ.ಎಂ. ಸುರೇಶ್ ಅವರಿಗೆ ೮ ಮತಗಳು ಲಭ್ಯವಾದವು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳಿಗೆ ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಪಿ.ಎಂ. ಲತೀಫ್ ಜೆಡಿಎಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್‌ಖಾನ್, ಎಸ್‌ಡಿಪಿಐನ ಲತೀಫ್, ಉಸ್ಮಾನ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಂ.ಎ. ಉಸ್ಮಾನ್, ನಗರಾಧ್ಯಕ್ಷ ಕೆ.ಐ. ರಫೀಕ್ ಮತ್ತಿತರರು ಶುಭ ಹಾರೈಸಿದರು.