ಚೆಯ್ಯಂಡಾಣೆ, ಫೆ. ೧೧: ನರಿಯಂದಡ ಗ್ರಾ.ಪಂ. ಅಧ್ಯಕ್ಷರಾಗಿ ಬಿದ್ದಂಡ ಅಚ್ಚಯ್ಯ ರಾಜೇಶ್, ಉಪಾಧ್ಯಕ್ಷೆಯಾಗಿ ಮಂಜುಳಾ ಆಯ್ಕೆಯಾದರು. ನೂತನ ಅಧ್ಯಕ್ಷ ಅಚ್ಚಯ್ಯ ರಾಜೇಶ್ ಮಾತನಾಡಿ, ಗ್ರಾ.ಪಂ.ಗೆ ಬರುವ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುತ್ತೇನೆ ಎಂದರು.
ಈ ಸಂದರ್ಭ ಜಿ.ಪಂ. ಸದಸ್ಯ ಕಿರಣ್ ಕಾರ್ಯಪ್ಪ, ಕೋಡಿರ ಪ್ರಸನ್ನ, ಮಾಜಿ ಜಿ.ಪಂ. ಸದಸ್ಯೆ ಉಷಾ ದೇವಮ್ಮ, ತಾ.ಪಂ. ಸದಸ್ಯೆ ಉಮಾ ಪ್ರಭು, ಆರ್.ಎಂ.ಸಿ. ಮಾಜಿ ಉಪಾಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ, ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೋಟಂಬೈಲು ಸೇರಿದಂತೆ ಇನ್ನಿತರರು ಇದ್ದರು.