ವೀರಾಜಪೇಟೆ, ಫೆ.೧೧: ಕೊಳತೋಡು ಬೈಗೋಡು ಗ್ರಾಮದಲ್ಲಿ ಕಳೆದ ೬೯ ದಿನಗಳ ಹಿಂದೆ ಎಂ. ಕಾಮವ್ವ (೮೫) ಎಂಬ ವೃದ್ಧೆಯ ಮೃತದೇಹ ಮನೆಯ ಬಳಿಯ ಬಾವಿಯಲ್ಲಿ ಪತ್ತೆಯಾದ ಪ್ರಕರಣ ಪೊಲೀಸ್ ತನಿಖೆಯಿಂದ ಹೊಸ ತಿರುವು ಪಡೆದಿದ್ದು ಆಕೆಯ ಮಗ ದೇವಯ್ಯ (೪೦) ತಾಯಿಯನ್ನು ಹೊಡೆದು ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಬಾವಿಗೆ ಎಸೆದಿದ್ದ ನೆಂದೂ ತನಿಖೆಯಿಂದ ಬೆಳಕಿಗೆ ಬಂದಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಮೊದಲು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಐ.ಪಿ.ಸಿ ೩೦೨ ರ ಪ್ರಕಾರ ಕೊಲೆ ಮೊಕದ್ದಮೆ ದಾಖಲಿಸಿ ದೇವಯ್ಯನನ್ನು ಬಂಧಿಸಿ ಇಲ್ಲಿನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಆತನನ್ನು ೧೫ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡು ವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಮಗ ದೇವಯ್ಯ ಕಂಠಪೂರ್ತಿ ಕುಡಿದು ಬಂದು ತಾಯಿಯೊಂದಿಗೆ ಕ್ಷÄಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟಿದೆ. ಗಲಾಟೆ ವೇಳೆ ಮಗ ತಾಯಿಯನ್ನು ನೂಕಿದಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಳಿಕ ದಿಕ್ಕು ತೋಚದೆ ಬಾವಿಗೆ ಮೃತದೇಹವನ್ನು ಎಸೆಯ ಲಾಗಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ ೧ರಂದು ರಾತ್ರಿ ದೇವಯ್ಯ ತನ್ನ ತಾಯಿ ಕಾಮವ್ವನನ್ನು ಹೊಡೆದು ಕೊಲೆ ಮಾಡಿ ಮೃತದೇಹವನ್ನು ಬಾವಿಗೆ ಹಾಕಿ ತಾ.೨ರಂದು ಬಾವಿ ಯಲ್ಲಿ ಮೃತದೇಹ ಪತ್ತೆಯಾದ ನಂತರ ಗ್ರಾಮಾಂತರ ಪೊಲೀಸರು ಆಕೆಯ ಸಂಬAಧಿಕರ ದೂರಿನ ಮೇರೆ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ ದ್ದರು. ಆದರೆ ತಾ.೨ರಂದು ಮೃತದೇಹ ವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾ ಯಿತು. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಎರಡು ದಿನಗಳ ಹಿಂದೆ ಇದು ಆತ್ಮಹತ್ಯೆಯಲ್ಲ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂಬ ವರದಿಯನ್ನು ಆದರಿಸಿ ಪೊಲೀಸರು ತನಿಖೆ ನಡೆಸಿದ ನಂತರ ಮಗ ದೇವಯ್ಯ ತಾಯಿಯ ಕೊಲೆ ಮಾಡಿರು ವುದು ಬೆಳಕಿಗೆ ಬಂದಿದೆ. ಪೊಲೀಸರು ದೇವಯ್ಯನನ್ನು ನಿನ್ನೆ ಬಂಧಿಸಿ ಇಂದು ನ್ಯಾಯಾಲ ಯದ ಮುಂದೆ ಹಾಜರುಪಡಿಸಿದರು.