ಕೂಡಿಗೆ, ಫೆ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಇಂದಿರಾ, ಉಪಾಧ್ಯಕ್ಷರಾಗಿ ಬಾಸ್ಕರ್ ನಾಯಕ್ ಆಯ್ಕೆಗೊಂಡರು.

ಚುನಾವಣೆ ಅಧಿಕಾರಿಯಾಗಿ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಶಿರಸ್ತೇದಾರ್ ಲೋಹಿತ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಕಾರ್ಯನಿರ್ವಹಿಸಿದರು.

ವಿಜೇತರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎದುರು ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ನಡೆಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ ರೈ, ಪ್ರಮುಖರಾದ ಕುಮಾರಪ್ಪ ಸೇರಿದಂತೆ ಇನ್ನಿತರರು ಇದ್ದರು.