ಬೆಂಗಳೂರು, ಫೆ. ೧೦: ಮರಳು ಗಣಿಗಾರಿಕೆ ನಿಯಮಗಳನ್ನ ಸರಳಗೊಳಿಸಲಾಗಿದ್ದು ಇನ್ನು ಮುಂದೆ ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಹಾಗೂ ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೧ ರ ನೂತನ ಗಣಿ ನೀತಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದರು.ಹಳ್ಳ, ಕೊಳ್ಳಗಳಲ್ಲಿ ಸಿಗುವ ಉಸುಕು ಬಳಕೆಗೆ ಅವಕಾಶ ಮಾಡಿಕೊಡಲಾಗುವುದು, ಎತ್ತಿನಗಾಡಿ, ಟ್ರ‍್ಯಾಕ್ಟರ್ ಗಳಲ್ಲಿ ಮರಳು ತರಲು ಅವಕಾಶ ನೀಡಲಾಗುವುದು, ಇದುವರೆಗೆ ಎಲ್ಲದಕ್ಕೂ ನಿರ್ಬಂಧ ಹೇರಲಾಗಿತ್ತು. ಇದರಿಂದ ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಮರಳು ಸಿಗುತ್ತಿರಲಿಲ್ಲ. ಆದರೆ ಇದೀಗ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಮಹಾರಾಷ್ಟçದಲ್ಲಿ ಗಾಡಿ, ಬೈಕ್,ಕತ್ತೆಗಳಲ್ಲಿ ಮರಳು ಸಾಗಿಸಿದರೂ ಎಫ್ ಐಆರ್ ಹಾಕುತ್ತಾರೆ. ಆದರೆ ಇಲ್ಲಿ ಅಂತವುಗಳಿಗೆ ಅವಕಾಶ ನೀಡಬಾರದೆಂದು ಚಿಂತನೆ ನಡೆಸಲಾಗಿದೆ. ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಗಣಿ ನೀತಿಗಳನ್ನಸರಳೀಕರಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು.ಗಣಿಗಾರಿಕೆಯಿಂದ ಪ್ರಸ್ತುತ ೩೭೦೦ ಕೋಟಿ ರಾಜಸ್ವ ಧನ ಬರುತ್ತಿದೆ, ಆದಾಯವನ್ನು ಮತ್ತಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಕಡಿಮೆ ದರದಲ್ಲಿ ಎಲ್ಲರಿಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದರು. ಈ ನಿಟ್ಟಿನಲ್ಲಿ ಹೊಸ ಮರಳು ನೀತಿ ಶೀಘ್ರದಲ್ಲೇ ಜಾರಿಗೆ ತರುತ್ತೇವೆ, ಪ್ರಸ್ತುತ ಮೂರು ಕಮಿಟಿ ರಚಿಸಿದ್ದೇವೆ, ಆಂಧ್ರಕ್ಕೆ ಇಂದು ಒಂದು ಸಮಿತಿ ಹೋಗಿದ್ದು ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಲಿದೆ ಹಾಗೂ ಈ ಬಗ್ಗೆ ವರದಿ ನೀಡಲಿದೆ ಎಂದು ಮಾಹಿತಿ ನೀಡಿದರು.

ಸುಲಭವಾಗಿ ಎಲ್ಲರಿಗೂ ಮರಳು ಸಿಗಬೇಕು ಆದರೆ ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ಟೆಕ್ನಿಕಲಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿಯಮ ರೂಪಿಸಿ ವೈಜ್ಞಾನಿಕವಾಗಿ ಮರಳು ತೆಗೆಯುವ ಬಗ್ಗೆ ನೂತನ ನೀತಿಯಲ್ಲಿ ಜಾರಿಗೆ ಬರಲಿದೆ. ಎಷ್ಟು ಮರಳು ತೆಗೆಯಬಹುದು, ಮರಳು,

(ಮೊದಲ ಪುಟದಿಂದ) ಮಣ್ಣು, ಗರಸು ಎಂದು ವಿಭಾಗಿಸುತ್ತೇವೆ. ಮರಳನ್ನು ಮಾತ್ರ ತೆಗೆಯಲು ಅವಕಾಶ ಸಿಗಲಿದೆ ಎಂದರು.

ಖನಿಜ ಪ್ರತಿಷ್ಠಾನ ಟ್ರಸ್ಟ್ಗಳು ಅಸ್ತಿತ್ವದಲ್ಲಿದೆ

ಜಿಲ್ಲಾ ಮಟ್ಟದಲ್ಲಿ ಖನಿಜ ಪ್ರತಿಷ್ಠಾನ ಟ್ರಸ್ಟ್ಗಳು ಅಸ್ತಿತ್ವದಲ್ಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಟ್ರಸ್ಟ್ ಮೂಲಕ ಕುಡಿಯುವ ನೀರು, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಅಳತೆ, ಆರೋಗ್ಯ., ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಬAಧ ಕಾರ್ಯಕ್ರಮ, ವಯಸ್ಸಾದ ಮತ್ತು ವಿಕಲಚೇತನ ವ್ಯಕ್ತಿಗಳ ಕಲ್ಯಾಣ, ಕೌಶಲ್ಯ ಅಭಿವೃದ್ಧಿ, ನೈರ್ಮಲ್ಯತೆ, ಭೌತಿಕ ಮೂಲ ಸೌಕರ್ಯ, ನೀರಾವರಿ, ಶಕ್ತಿ ಮತ್ತು ನೀರಿನ ಅಭಿವೃದ್ಧಿ, ಗಣಿಗಾರಿಕೆ ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ.

ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿರುತ್ತಾರೆ. ರಾಜ್ಯ ಮಟ್ಟದ ಸಮಿತಿಗೆ ಸಚಿವರೇ ಮುಖ್ಯಸ್ಥರು ಎಂದು ಸ್ಪಷ್ಟಪಡಿಸಿದರು. ರೂ.೫.೦೦ ಕೋಟಿಗಿಂತ ಕಡಿಮೆ ಮೊತ್ತದ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳೇ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ರೂ.೫.೦೦ ಕೋಟಿಗಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳಿಗೆ ಸಚಿವರ ನೇತೃತ್ವದ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಈ ಮೂಲಕ ಪರವಾನಿಗೆ ಪಡೆಯಲು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಅನುಕೂಲ ಕಲ್ಪಿಸಲಿದೆ. ಅರಣ್ಯ, ಪರಿಸರ, ಕಂದಾಯ ಮತ್ತು ಗೃಹ ಇಲಾಖೆಯ ನಡುವೆ ಸಮನ್ವಯ ಸಾಧಿಸಿ ಏಕ ಗವಾಕ್ಷಿ ಯೋಜನೆಯಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದರು.

೨೦೨೦-೨೧ನೇ ಸಾಲಿನಲ್ಲಿ ರೂ.೩೭೫೦ ಕೋಟಿ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ ರಾಜಸ್ವ ಸಂಗ್ರಹ ದ್ವಿಗುಣಗೊಳಿಸುವ ಗುರಿ ಇದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ತಾಲೂಕು ಮಟ್ಟದಲ್ಲಿ ಉಪವಿಭಾಗ ಸೃಷ್ಟಿ ಮಾಡಲಾಗುತ್ತದೆ.

ಬೆೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಗರ್ಭ ಶಾಸ್ತçಜ್ಞರು ಮುಂದೆ ಕಡ್ಡಾಯವಾಗಿ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಇದರಿಂದ ಅವಘಡಗಳನ್ನು ತಪ್ಪಿಸಿ ಇಲಾಖೆಯ ಬಲವರ್ಧನೆಗೆ ಅನುಕೂಲವಾಗಲಿದೆ. ರಾಜ್ಯದಲ್ಲಿಯೂ ಗಣಿ ವಿಶ್ವವಿದ್ಯಾಲಯ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ನಾಲ್ಕು ಕಂದಾಯ ವಿಭಾಗ ಹಾಗೂ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಗಣಿ ಅದಾಲತ್ ಆರಂಭಿಸಲಾಗುವುದು. ತ್ವರಿತವಾಗಿ ಗಣಿ ಸಂಬAಧಿತ ಅರ್ಜಿಗಳ ವಿಲೇವಾರಿಗೆ ಅನುಕೂಲ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ಭರವಸೆ ನೀಡಿದರು.