ಮಡಿಕೇರಿ, ಫೆ. ೧೦: ಕೊರೊನಾ ಮಹಾಮಾರಿಯ ವಿರುದ್ಧ ಕಂಡು ಹಿಡಿಯಲಾಗಿರುವ ಲಸಿಕೆಯನ್ನು ನೀಡುವ ಸಂಬAಧ ಕೊಡಗಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡನೇ ಹಂತದ ಅಭಿಯಾನದಲ್ಲಿ ನಿರೀಕ್ಷಿತ ಗುರಿ ಸಾಧನೆ ಆಗಿಲ್ಲ.ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ೬೫೬೦ ಫಲಾನುಭವಿ ಗಳಲ್ಲಿ ೪,೪೩೨ ಮಂದಿಗೆ ಲಸಿಕೆ ನೀಡುವ ಮೂಲಕ ಶೇ. ೬೭.೫೬ ಗುರಿ ಸಾಧನೆಯೊಂದಿಗೆ ರಾಜ್ಯದಲ್ಲಿಯೆ ಕೊಡಗು ಜಿಲ್ಲೆ ೪ನೇ ಸ್ಥಾನ ಪಡೆದಿತ್ತಾದರೂ ಎರಡನೇ ಹಂತದ ಅಭಿಯಾನದಲ್ಲಿ ನಿನ್ನೆ ೩೦೯ ಹಾಗೂ ಇಂದು ೨೯೯ ಮಂದಿ ಸೇರಿದಂತೆ ಒಟ್ಟು ೬೦೮ ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದು, ಕೇವಲ ಶೇ. ೧೯.೪೪ ಮಾತ್ರ ಸಾಧನೆಯಾಗಿದೆ.ಎರಡನೇ ಹಂತದಲ್ಲಿ ೩೧೨೬ ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡುವ ಮೂಲಕ ಶೇ. ೬೭.೫೬ ಗುರಿ ಸಾಧನೆಯೊಂದಿಗೆ ರಾಜ್ಯದಲ್ಲಿಯೆ ಕೊಡಗು ಜಿಲ್ಲೆ ೪ನೇ ಸ್ಥಾನ ಪಡೆದಿತ್ತಾದರೂ ಎರಡನೇ ಹಂತದ ಅಭಿಯಾನದಲ್ಲಿ ನಿನ್ನೆ ೩೦೯ ಹಾಗೂ ಇಂದು ೨೯೯ ಮಂದಿ ಸೇರಿದಂತೆ ಒಟ್ಟು ೬೦೮ ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದು, ಕೇವಲ ಶೇ. ೧೯.೪೪ ಮಾತ್ರ ಸಾಧನೆಯಾಗಿದೆ.
ಎರಡನೇ ಹಂತದಲ್ಲಿ ೩೧೨೬ ಮಂದಿ ಫಲಾನುಭವಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇಂದು ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಒಂದೆಡೆ ಕೋವಿಡ್ ಲಸಿಕೆ ಪಡೆಯಬೇಕಿರುವ ಫಲಾನುಭವಿಗಳಿಗೆ ಸಂದೇಶ ಕಳುಹಿಸಿ ಆಹ್ವಾನಿಸಿದರೂ ಕೂಡ ಬಹುತೇಕ ಮಂದಿ ಲಸಿಕೆ ಸ್ವೀಕಾರಕ್ಕೆ ಮುಂದಾಗುತ್ತಿಲ್ಲ. ಯಾಕಾಗಿ ಬೇಡ ಎಂಬುದಕ್ಕೂ ಕಾರಣ ನೀಡುತ್ತಿಲ್ಲ ಎನ್ನಲಾಗಿದ್ದು, ಮತ್ತೊಂದೆಡೆ ಬೇರೆಯವರು ಹಾಕಿಸಿಕೊಳ್ಳಲಿ; ಏನೂ ಅಡ್ಡ ಪರಿಣಾಮ ಉಂಟಾಗ ದಿದ್ದರೆ ನಂತರ ಬೇಕಾದರೆ ಹಾಸಿಕೊಳ್ಳೋಣ ನಾವು ಎಂದು ಫಲಾನುಭವಿಗಳು ಧೋರಣೆ ತಳೆದಿರುವುದರಿಂದ ಅಭಿಯಾನ ವೇಗ ಕಳೆದುಕೊಳ್ಳುತ್ತಿದೆ ಎಂಬುದಾಗಿ ‘ಶಕ್ತಿ’ಗೆ ಬಲ್ಲಮೂಲಗಳಿಂದ ದೃಢಪಟ್ಟಿದೆ.
ಆರೋಗ್ಯ ಇಲಾಖೆಯ ನಿಯಮದನ್ವಯ ಈ ಲಸಿಕೆಯನ್ನು ಬಲವಂತವಾಗಿ ಯಾರಿಗೂ ಹಾಕುವಂತಿಲ್ಲ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಲಸಿಕೆ ಪಡೆದಿದ್ದರಾದರೂ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರುಗಳಲ್ಲಿ ಸುಮಾರು ೫೦೦ ಮಂದಿ ಕೋವಿಡ್ ಲಸಿಕೆಯನ್ನು ನಿರಾಕರಿಸಿದ್ದಾರೆ. ಇನ್ನು ಎರಡನೇ ಹಂತದಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್ ಹಾಗೂ ಪೊಲೀಸ್ ಇಲಾಖೆಯ ಮುಂಚೂಣಿ
(ಮೊದಲ ಪುಟದಿಂದ) ಕಾರ್ಯಕರ್ತರಿಗೆ ನಗರ ಸಭೆ ಪಟ್ಟಣ ಪಂಚಾಯತ್, ಪೌರಕಾರ್ಮಿಕರಿಗೆ ಲಸಿಕೆ ಹಾಕುವ ತೀರ್ಮಾನ ಮಾಡಲಾಗಿತ್ತಾದರೂ ಇಂದಿನವರೆಗೆ ಕೇವಲ ೬೦೮ ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ.
ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ. ಯಾವದೇ ಆತಂಕಕ್ಕೆ ಒಳಗಾಗದೆ ಕೋವಿಡ್ ಲಸಿಕೆಯನ್ನು ಪಡೆಯಬಹುದೆಂದು ಆರೋಗ್ಯ ಇಲಾಖೆ ಧೈರ್ಯ ತುಂಬಿದರೂ ಕೂಡ ಎಲ್ಲಿಯೋ ಒಂದು ಕಡೆ ಲಸಿಕೆಯಿಂದ ತೊಂದರೆಗಳಾಗಬಹುದು ಎಂಬ ಭಯದ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಮುಂದೆ ಬರುವ ಫಲಾನುಭವಿಗಳ ಸಂಖ್ಯೆ ಕ್ಷೀಣಗೊಳ್ಳುತ್ತಿದೆ ಎಂಬುದು ಅಧಿಕಾರಿ ವಲಯದ ಅನಿಸಿಕೆ. ಮೂಲಗಳ ಪ್ರಕಾರ ಮೊದಲ ಹಂತದಲ್ಲೇ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರುಗಳಲ್ಲಿ ಶೇ. ೫೦ ರಷ್ಟು ಮಂದಿ ಈ ಲಸಿಕೆಯನ್ನು ಪಡೆದಿಲ್ಲ. ಈ ಬೆಳವಣಿಗೆಯ ನಡುವೆಯೂ ಮೊದಲ ಹಂತದಲ್ಲಿ ಶೇ. ೬೭.೫೬ ರಷ್ಟು ಸಾಧನೆ ಮಾಡಲಾಗಿತ್ತು. ಆದರೆ ಎರಡನೇ ಹಂತದಲ್ಲಿ ಈ ಪ್ರಗತಿ ಮತ್ತಷ್ಟು ಕುಸಿದಿದೆ.
ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರು, ತಾನು ಸೇರಿದಂತೆ ತನ್ನ ಕಚೇರಿ ಸಿಬ್ಬಂದಿ, ಅಧಿಕಾರಿಗಳು ಸ್ವತಃ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇವೆ. ಯಾವದೇ ಅಡ್ಡಪರಿಣಾಮಗಳಿಲ್ಲ ಎಂಬುದಾಗಿಯೂ ಇಲಾಖೆ ಮೂಲಕ ಖಚಿತಪಡಿಸಿದ್ದೇವೆ. ಹೀಗಿದ್ದರೂ ಕೂಡ ಲಸಿಕೆ ಪಡೆಯಬೇಕಾದ ಫಲಾನುಭವಿಗಳು ಯಾಕಾಗಿ ಭಯಪಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗುವದಾಗಿ ಹೇಳಿದರು.
ಲಸಿಕೆ ಬಗ್ಗೆ ಯಾವದೇ ಆತಂಕ ಬೇಡ ಅದರ ಬಗ್ಗೆ ಯಾವದೇ ರೀತಿಯ ಸಂಶಯವಿದ್ದರೂ ಅದನ್ನು ನಿವಾರಿಸಲು ನಾವು ಸಿದ್ದರಿದ್ದೇವೆ ಎಂದು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ. ಲೋಕೇಶ್ ಅವರು ತಿಳಿಸಿದ್ದು, ಮೊದಲ ಹಂತದಲ್ಲಿ ವೈದ್ಯಕೀಯ ಕಾಲೇಜಿನ ಸುಮಾರು ೯೭೮ ಮಂದಿ ಆರೋಗ್ಯ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲೆಗೆ ಇದುವರೆಗೆ ೧೨೯೬೦ ಕೋವಿಡ್ ಲಸಿಕೆಗಳು ಬಂದಿವೆ ಎಂದು ಆರ್ಹೆಚ್ಸಿ ಅಧಿಕಾರಿ ಡಾ. ಗೋಪಿನಾಥ್ ತಿಳಿಸಿದ್ದಾರೆ.