ಮಡಿಕೇರಿ, ಫೆ. ೧೦ : ಅರಣ್ಯದಲ್ಲಿ ಅಕ್ರಮವಾಗಿ ಕಾಡು ಕೋಣ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದವರು ಈ ಸಂಬAಧ ಓರ್ವನನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ನಾಪೋಕ್ಲು ಠಾಣಾ ವ್ಯಾಪ್ತಿಯ ಕೊಳಕೇರಿಯಲ್ಲಿ ಕಾಡುಕೋಣ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಡಿಸಿಐಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಲ್ಲಿನ ನಿವಾಸಿ ಮಡಿಕೇರಿ, ಫೆ. ೧೦ : ಅರಣ್ಯದಲ್ಲಿ ಅಕ್ರಮವಾಗಿ ಕಾಡು ಕೋಣ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದವರು ಈ ಸಂಬAಧ ಓರ್ವನನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ನಾಪೋಕ್ಲು ಠಾಣಾ ವ್ಯಾಪ್ತಿಯ ಕೊಳಕೇರಿಯಲ್ಲಿ ಕಾಡುಕೋಣ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಡಿಸಿಐಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಲ್ಲಿನ ನಿವಾಸಿ (ಮೊದಲ ಪುಟದಿಂದ) ಕಾಡುಕೋಣ ಅಂದಾಜು ೧೦೦ಕೆಜಿಗೂ ಅಧಿಕ ತೂಕವಿರುತ್ತದೆ. ಆದರೆಆರೋಪಿಗಳಲ್ಲಿ ೨೨ಕೆಜಿಯಷ್ಟು ಮಾತ್ರ ಮಾಂಸ ಲಭಿಸಿದ್ದು, ಇನ್ನುಳಿದ ಮಾಂಸ, ಹಾಗೂ ಬೇಟೆಯಾಡಿದ ಜಾಗದ ಬಗ್ಗೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಯಾದ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ. ಕಳೆದ ವರ್ಷ ಬೃಹತ್ ಗಾತ್ರದ ಕಡವೆ ಬೇಟೆಯಾಡಿದ ಸಂಬAಧ ಕೊಳಕೇರಿ ಸನಿಹದ ಕುಂಜಿಲದ ಆರೋಪಿಗಳನ್ನು ಬಂಧಿಸಲಾಗಿತ್ತು. ಕಾಡುಕೋಣ, ಕಾಡೆಮ್ಮೆಗಳನ್ನು ಬೇಟೆ ಮಾಡಿ ಮಂಸವನ್ನು ಮದುವೆ, ಇನ್ನಿತರಸಮಾರಂಭಗಳಿಗೆ ಮಾರಾಟ ಮಾಡಲಾಗುತ್ತದೆ ಎಂಬ ಮಾತು ನಾಪೋಕ್ಲು ಪರಿಸರದಲ್ಲಿ ಕೇಳಿಬರುತ್ತಿದೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರ ಮಾರ್ಗದರ್ಶನದಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ, ಎಎಸ್‌ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ಶರತ್ ರೈ, ವೆಂಕಟೇಶ್, ಸುರೇಶ್, ಚಾಲಕ ಶಶಿಕುಮಾರ್ ಭಾಗವಹಿಸಿದ್ದರು.