ಕಣಿವೆ, ಫೆ. ೧೦: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿರುವ ವಿರಕ್ತ ಮಠದ ಆವರಣದಲ್ಲಿ ರೂಪಾಯಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಮಠದ ಲೋಕಾರ್ಪಣೆ ತಾ. ೧೪ ರಂದು ನಡೆಯುತ್ತಿದೆ. ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮೀಜಿಗಳ ೯ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಣಿವೆ, ಫೆ. ೧೦: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿರುವ ವಿರಕ್ತ ಮಠದ ಆವರಣದಲ್ಲಿ ರೂಪಾಯಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಮಠದ ಲೋಕಾರ್ಪಣೆ ತಾ. ೧೪ ರಂದು ನಡೆಯುತ್ತಿದೆ. ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮೀಜಿಗಳ ೯ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಣಿವೆ, ಫೆ. ೧೦: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿರುವ ವಿರಕ್ತ ಮಠದ ಆವರಣದಲ್ಲಿ ರೂಪಾಯಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಮಠದ ಲೋಕಾರ್ಪಣೆ ತಾ. ೧೪ ರಂದು ನಡೆಯುತ್ತಿದೆ. ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮಹಾಂತ ಸ್ವಾಮೀಜಿಗಳ ೯ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಬಿ.ಡಿ. ನಟೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಬಿ. ಶಿವಪ್ಪ,ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹಾಲಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿನ್ನೆಲೆ: ಕೊಡಗು ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ ಲಿಂಗಾಯಿತ ರಾಜರು ಕೊಡಗಿನಾ ದ್ಯಂತ ಸಾವಿರಾರು ಎಕರೆ ಭೂಮಿ ಯನ್ನು ಜಹಗೀರು ನೀಡಿದ್ದರು. ಹಾಗೆಯೇ ತೊರೆನೂರಿನ ವಿರಕ್ತ ಮಠಕ್ಕೂ ಭೂಮಿಯನ್ನು ಜಹಗೀರ್ ನೀಡಲಾಗಿತ್ತು. ಹೀಗೆ ಜಹಗೀರ್ ನೀಡಿದ ಪ್ರದೇಶಗಳ ಪೈಕಿ ಹಾರಂಗಿ ಜಲಾಶಯದ ಮುಳುಗಡೆಯ ಜಾಗ, ಕುಶಾಲನಗರ ಕೈಗಾರಿಕಾ ಬಡಾವಣೆಯ ಜಾಗ, ಸರ್ಕಾರಿ ಪಾಲಿಟೆಕ್ನಿಕ್
(ಮೊದಲ ಪುಟದಿಂದ) ಜಾಗ, ವೀರಾಜಪೇಟೆ ತಾಲೂಕಿನ ಬೆಮ್ಮತ್ತಿಯಲ್ಲಿ ನೂರು ಎಕರೆ, ಧನುಗಾಲ, ಮಾಯಮುಡಿ, ಗೋಣಿಕೊಪ್ಪ ಹೀಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಸಾವಿರಾರು ಎಕರೆ ಭೂಮಿ ಸೇರಿತ್ತು.
ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಇರುವ ಶ್ರೀಮಠಗಳ ಪೈಕಿ ತೊರೆನೂರು ಮಠಕ್ಕೂ ಜಹಗೀರ್ ನೀಡಿದ್ದರು ಎಂಬ ಪ್ರತೀತಿ ಇದೆ. ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿರುವ ವಿರಕ್ತ ಮಠಕ್ಕೆ ತನ್ನದೇ ಆದ ಪರಂಪರೆ ಇದೆ. ಹನ್ನೆರಡನೇ ಶತಮಾನದಲ್ಲಿ ಬಸವೇಶ್ವರರು ಕಂಡ ಸಮ ಸಮಾಜದ ಪರಿಕಲ್ಪನೆಯೊಂದಿಗೆ ಕನ್ನಡ ನಾಡಿನ ಆಧ್ಯಾತ್ಮಿಕ ಪರಂಪರೆಯನ್ನು ನಾಡಿಗೆ ಸಾರುವ ನಿಟ್ಟಿನಲ್ಲಿ ಪಾದಯಾತ್ರೆ ಹೊರಟ ಯಡಿಯೂರಿನ ತೋಂಟದ ಸಿದ್ದಲಿಂಗೇಶ್ವರರು ಪಾದ ಸ್ಪರ್ಶ ಮಾಡಿದ ಪುಣ್ಯಭೂಮಿ ತೊರೆನೂರಿನ ಕಾವೇರಿ ನದಿಯ ದಂಡೆಯಲ್ಲಿನ ಈ ಸುಕ್ಷೇತ್ರ. ತೋಂಟದ ಸಿದ್ದಲಿಂಗೇಶ್ವರರ ಶಿಷ್ಯ ಪರಂಪರೆಯ ಶ್ರೀ ಮರುಳು ಸಿದ್ದೇಶ್ವರರು ಈ ಮಠದ ಮೂಲ ಪೂಜ್ಯ ಸ್ವಾಮೀಜಿಗಳು ಎನ್ನಲಾಗಿದೆ.
ತಪೋಧನರು ಹಾಗೂ ನಿಗ್ರಹಾನುಗ್ರಹ ಪರಮ ಸಂಪನ್ನರಾದ ಈ ಮರುಳು ಸಿದ್ದೇಶ್ವರರು ತುಂಬಿ ಹರಿಯುತ್ತಿದ್ದ ಕಾವೇರಿ ನದಿಯನ್ನು ಕೇವಲ ಬಾಳೆಯ ಎಲೆಯ ಮೇಲೆ ಕುಳಿತು ದಾಟಿದ್ದರು ಎಂಬ ಪ್ರತೀತಿ ಇದೆ. ಪೂಜ್ಯರ ಸಂಕಲ್ಪ ಶಕ್ತಿ, ಪೂಜಾನಿಗ್ರಹ, ಧರ್ಮನಿಷ್ಠೆ, ಅಚಲ ಭಕ್ತಿ ಹಾಗೂ ಧ್ಯಾನಕ್ಕೆ ಈ ಪ್ರಸಂಗವೇ ಮೂಲ ಸಾಕ್ಷಿ ಎನ್ನಲಾಗುತ್ತಿದೆ.
ಈ ಮರುಳು ಸಿದ್ದೇಶ್ವರರು ತೋರುತ್ತಿದ್ದ ಅಗಣಿತ ಲೀಲೆಗಳು ಕೊಡಗನ್ನಾಳುತ್ತಿದ್ದ ಲಿಂಗಾಯಿತ ರಾಜ ವೀರರಾಜೇಂದ್ರ ಒಡೆಯರ್ ಕಿವಿಗೆ ಬಿದ್ದೊಡನೆ ತಮ್ಮ ಮಂತ್ರಿಯ ಮೂಲಕ ಕರೆಕಳುಹಿಸಿ ಮಡಿಕೇರಿಯ ಅರಮನೆಗೆ ಬರುವಂತೆ ಹೇಳಿ ಕಳುಹಿಸುತ್ತಾನೆ.
ರಾಜನ ಕರೆಯನ್ನು ನಯವಾಗಿಯೇ ತಿರಸ್ಕರಿಸಿದ ಮರುಳು ಸಿದ್ದೇಶ್ವರರು, ‘‘ಅರಮನೆಗೆ ಬರಲಾರೆನು ಎಂದು ನಿನ್ನ ರಾಜನಿಗೆ ತಿಳಿಸು’’ ಎಂದು ತಮ್ಮ ದೇಹದ ಮೇಲಿದ್ದ ರೋಮವನ್ನು ಕಿತ್ತು ವಸ್ತçದೊಳಗೆ ಮುಚ್ಚಿಟ್ಟು ಮಂತ್ರಿಯ ಕೈಗಿಟ್ಟು ಕಳುಹಿಸಲಾಗಿ, ಅದನ್ನು ರಾಜ ನೋಡಲಾಗಿ ಈ ಮರುಳುಸಿದ್ದೇಶ್ವರರು ಕಿತ್ತು ಕೊಟ್ಟಿದ್ದ ರೋಮಗಳು ಚಿನ್ನದ ದಾರಗಳಾಗಿದ್ದನ್ನು ಕಂಡ ರಾಜ ವೀರರಾಜೇಂದ್ರ ಕೂಡಲೇ ತನ್ನ ಪರಿವಾರ ಸಹಿತ ಶ್ರೀಮಠಕ್ಕೆ ಬಂದು ಗುರುಗಳ ದರ್ಶನ ಹಾಗೂ ಆಶೀರ್ವಾದ ಪಡೆದು, ಕೊನೆಗೆ ಗುರುಕಾಣಿಕೆಯಾಗಿ ಉದಾರವಾಗಿ ನೂರಾರು ಎಕರೆ ಭೂಮಿಯನ್ನು ಮಠಕ್ಕೆ ನೀಡಿ ಕೃತಾರ್ಥನಾದ. ಬಳಿಕ ಈ ರಾಜ ಗುರುಗಳಿಗೆ ನೀಡಿದ ಸರ್ವಸ್ವವನ್ನು ಸಂರಕ್ಷಿಸಲು ಮಠದ ಆವರಣದಲ್ಲಿನ ಚೌಡೇಶ್ವರಿ ದೇವಿಯು ದೊಡ್ಡಮ್ಮ ಹಾಗೂ ಚಿಕ್ಕಮ್ಮ ಎಂಬ ಅಕ್ಕ ತಂಗಿಯರ ರೂಪದಲ್ಲಿ ಶ್ರೀಮಠದ ಆವರಣದಲ್ಲಿ ಶಾಶ್ವತವಾಗಿ ನೆಲೆನಿಂತ ಬಗ್ಗೆ ಶ್ರೀಮಠದ ಪೀಠಾಧಿಪತಿ ಶ್ರೀ ಮಲ್ಲೇಶ ಸ್ವಾಮೀಜಿ ವಿವರಿಸುತ್ತಾರೆ.
ಪ್ರತೀ ವರ್ಷ ಇಲ್ಲಿನ ಚೌಡೇಶ್ವರಿ ದೇವಿಯ ಪೂಜೆ ಮೂಲಕ ಜಗನ್ಮಾತೆಯ ಸೇವೆ ನಡೆಯುತ್ತಿದೆ. ಅನೇಕ ಪವಾಡಗಳ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದ ಮರುಳು ಸಿದ್ದೇಶ್ವರರು ಈ ಕ್ಷೇತ್ರದಲ್ಲಿ ನಿರ್ವಿಕಲ್ಪ ಸಮಾಧಿಸ್ಥರಾಗಿ ಇಂದಿಗೂ ಭಕ್ತರನ್ನು ಹರಸುತ್ತಿದ್ದಾರೆ. ಬಳಿಕ ಶ್ರೀ ಮಠಕ್ಕೆ ಚನ್ನಮಲ್ಲಪ್ಪಸ್ವಾಮೀಜಿ, ಶ್ರೀ ಬಸವಲಿಂಗಸ್ವಾಮೀಜಿ, ಶ್ರೀ ಗುರುಲಿಂಗಸ್ವಾಮೀಜಿ ಮೊದಲಾದವರು ಶ್ರೀ ಮಠವನ್ನು ಮುನ್ನಡೆಸಿಕೊಂಡು ಬಂದು ಬಳಿಕ ಮಹಾಂತಸ್ವಾಮೀಜಿಯವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದರು.
ಮಠದ ಅಧೀನದಲ್ಲಿನ ಅಪಾರ ಪ್ರಮಾಣದ ಕೃಷಿ ಭೂಮಿಯಲ್ಲಿ ತಾವೇ ಸ್ವತಃ ಎತ್ತುಗಳನ್ನು ಕಟ್ಟಿ ಉಳುಮೆ ಮಾಡುತ್ತಿದ್ದ ಶ್ರೀ ಮಹಾಂತ ಸ್ವಾಮೀಜಿಯ ಬಳಿಕ ಇಂದಿನ ಮಲ್ಲೇಶ ಸ್ವಾಮೀಜಿ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಹಾಸನ ಮಡಿಕೇರಿ ರಾಜ್ಯ ಹೆದ್ದಾರಿಯಂಚಿನಲ್ಲಿನ ಕಾವೇರಿ ನದಿ ದಂಡೆಯಲ್ಲಿನ ಈ ಮಠದ ಕಟ್ಟಡಗಳು ಹಳೆಯದಾಗಿದ್ದ ಕಾರಣ ಶ್ರೀ ಮಲ್ಲೇಶ ಸ್ವಾಮೀಜಿಯವರ ಶ್ರಮದ ಫಲವಾಗಿ ಇಂದು ಒಂದೂವರೆ ಕೋಟಿ ವೆಚ್ಚದ ನೂತನ ಮಠ ತಲೆ ಎತ್ತುತ್ತಿದೆ. ಪೂರ್ವಾಭಿಮುಖವಾಗಿ ತಲೆಎತ್ತಿರುವ ನೂತನ ಕಟ್ಟಡಕ್ಕೆ ಈಗಾಗಲೇ ಒಂದು ಕೋಟಿ ಹಣ ವ್ಯಯವಾಗಿದೆ. ಸಂಪೂರ್ಣ ಕಾಮಗಾರಿಗೆ ಇನ್ನೂ ೫೦ ಲಕ್ಷ ಹಣದ ಅಗತ್ಯವಿದೆ. ಈಗಾಗಲೇ ಖರ್ಚಾಗಿರುವ ಒಂದು ಕೋಟಿ ರೂಗಳ ಪೈಕಿ ೩೫ ಲಕ್ಷ ರೂಗಳನ್ನು ಹಿಂದಿನ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ಅವರು ಒದಗಿಸಿದ್ದರು. ಉಳಿದ ೭೦ ಲಕ್ಷ ರೂಗಳ ಪೈಕಿ ಒಂದಷ್ಟು ಹಣ ಮಠದ ಅಧೀನದಲ್ಲಿರುವ ಕೃಷಿ ಭೂಮಿಯ ವರಮಾನದಿಂದ,
ಮತ್ತಷ್ಟು ಹಣವನ್ನು ಸಾಲ ತಂದು ಮಾಡಿದ್ದೇನೆ. ಭಕ್ತಾದಿಗಳ ಬಳಿ ತೆರಳಿ ಸಹಕಾರ ಕೇಳೋಣ ಎಂದರೆ ಕೊರೊನಾ ಸಂಕಷ್ಟದಲ್ಲಿ ಭಕ್ತರಿದ್ದಾರೆ ಏನು ಮಾಡುವುದು ಹೇಳಿ. ಎಲ್ಲಾ ಹಿರಿಯ ಶ್ರೀಗಳ ಕರುಣೆ ಹೇಗೋ ನಡೆಯುತ್ತಿದೆ ಎನ್ನುವ ಶ್ರೀಗಳು ಮಠಕ್ಕೆ ದೇಣಿಗೆ ಕೊಡಲು ಬಯಸುವ ಭಕ್ತರು ತÀನ್ನನ್ನು ೯೪೪೯೨೦೨೦೮೯, ೯೫೩೮೩೭೦೨೫೨ ಇಲ್ಲಿ ಸಂಪರ್ಕಿಸಬಹುದು ಎಂದು ಹೇಳುತ್ತಾರೆ.
-ವಿಶೇಷ ವರದಿ : ಕೆ.ಎಸ್.ಮೂರ್ತಿ