*ಗೋಣಿಕೊಪ್ಪಲು, ಫೆ. ೯: ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ನಮಗೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಸೌಲಭ್ಯಗಳನ್ನು ಹೊಂದಲು ಸಾಧ್ಯವಾಗಿಲ್ಲ. ನಮ್ಮ ಮನವಿಗೆ ಸ್ಪಂದಿಸಿ ಸೌಲಭ್ಯಗಳನ್ನು ಒದಗಿಸಿಕೊಡಿ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಬೆಂಡೆಗುತ್ತಿ ಕಾಲೋನಿಯ ನಿವಾಸಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ರೂ. ೫೦ ಲಕ್ಷ ಅನುದಾನದಲ್ಲಿ ನಿರ್ಮಾಣವಾಗುವ ಬೆಂಡೆಗುತ್ತಿ ಕಾಲೋನಿಗೆ ಸಂಪರ್ಕ ಬೆಸೆಯುವ ರಸ್ತೆ ಹಾಗೂ ತಡೆಗೋಡೆ ಕಾಮಗಾರಿಗೆ ಶಾಸಕರು ಚಾಲನೆ ಸಂದರ್ಭ ಶಾಸಕರಲ್ಲಿ ಪೈಸಾರಿ ನಿವಾಸಿಗಳು ಮನವಿಯನ್ನು ಸಲ್ಲಿಸಿದರು. ನಿವಾಸಿಗಳ ಮನವಿ ಸ್ವೀಕರಿಸಿದ ಶಾಸಕರು ತಕ್ಷಣವೇ ಸಮಸ್ಯೆ ಬಗೆಹರಿಸಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭ ರೂ. ೭೦ ಲಕ್ಷ ಅನುದಾನದಲ್ಲಿ ಬಾಳೆಲೆ-ಮೂರ್ಕಲ್ ಮುಖ್ಯ ರಸ್ತೆ, ರೂ. ೪೦ ಲಕ್ಷ ಅನುದಾನದಲ್ಲಿ ನಿಟ್ಟೂರು ಕಾಲಬೈರೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ, ರೂ. ೪೫ ಲಕ್ಷ ಅನುದಾನದಲ್ಲಿ ನಿಟ್ಟೂರು-ಕೊಲ್ಲಿಯಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ನಿಟ್ಟೂರು ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕಾಟಿಮಾಡ ಶರೀನ್, ಸಹ ಪ್ರಮುಖ್ ಅಳಮೇಂಗಡ ಸುರೇಶ್ ಸುಬ್ಬಯ್ಯ, ಜಿಲ್ಲಾ ಖಜಾಂಚಿ ಗುಮ್ಮಟ್ಟೀರ ಕಿಲನ್‌ಗಣಪತಿ, ನಿಟ್ಟೂರು ಗ್ರಾ.ಪಂ. ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ, ಪಡಿಞõÁರಂಡ ಕವಿತಾಪ್ರಭು, ಅಳಮೇಂಗಡ ಪವಿತಾರಮೇಶ್, ಜೆ.ಕೆ. ವಾಸು, ಅಮ್ಮಣಿ, ಸುಮತಿ, ಯರವರ ರಾಜು, ಕೃಷಿ ಮೋರ್ಚಾ ಅಧ್ಯಕ್ಷ ಮಾಚಂಗಡ ಅಶೋಕ್, ಬೂತ್ ಅಧ್ಯಕ್ಷ ಅಳಮೇಂಗಡ ಮೋಹನ್‌ಚಂಗಪ್ಪ, ಬಾಳೆಲೆ ವಿಜಯಪೂರ್ವ ಕಾಲೇಜಿನ ಅಧ್ಯಕ್ಷ ಬೋಸ್ ಮಂದಣ್ಣ, ಬಾಳೆಲೆ ವಿ.ಎಸ್.ಎಸ್.ಎನ್. ಅಧ್ಯಕ್ಷ ಕೃಷ್ಣಗಣಪತಿ ಸೇರಿದಂತೆ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.