ಕಡಂಗ, ಫೆ. ೯: ಗ್ರಾಮೀಣ ಮಟ್ಟದ ಯುವ ಕ್ರೀಡಾಪ್ರತಿಭೆಗಳನ್ನು ಹೊರತರಲು ೨೦೧೬ರಲ್ಲಿ ಪ್ರಾರಂಭಗೊAಡ ಕಡಂಗ ಪ್ರೀಮಿಯರ್ ಲೀಗ್ ೬ನೇ ಆವೃತ್ತಿಯ ಕ್ರೀಡಾಕೂಟವನ್ನು ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಟೈಟಾನ್ಸ್ ತಂಡ ಮತ್ತು ಸೂಪರ್ ಗಿಲ್ಲಿಸ್ ತಂಡದ ಫೈನಲ್ ಪಂದ್ಯದಲ್ಲಿ ಟೈಟಾನ್ಸ್ ಜಯಗಳಿಸಿತು. ಸೂಪರ್ ಗಿಲ್ಲಿಸ್ ರನ್ನರ್ಸ್ ಪ್ರಶಸ್ತಿ ಪಡೆಯಿತು.

ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ನೂತನವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ಕೆಪಿಎಲ್ ಕ್ರೀಡಾಕೂಟವು ಎಲ್ಲಾ ವರ್ಷವೂ ಅದ್ಧೂರಿಯಾಗಿ ನಡೆಸಲು ಭಾಗದ ಕ್ರೀಡಾಭಿಮಾನಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ ತಮ್ಮಯ್ಯ ಕಡಂಗ ಭಾಗದ ಸುತ್ತಮುತ್ತಲಿನ ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಕೆಪಿಎಲ್ ಸಹಕಾರಿಯಾಗಿದೆ ಎಂದು ತಿಳಿಸಿದರು.

ಅತಿಥಿಗಳಾಗಿ ಅಂಕಿತ್ ಪೊನ್ನಪ್ಪ, ಎನ್. ಅಯ್ಯಮ್ಮ, ವಿಠಲ್ ಉತ್ತಪ್ಪ, ಅಲಿ ಮನ್ನಾ, ಅಬ್ದುಲ್ಲಾ ಹಾಜಿ, ವೀಣಾ ಕೆದಮುಳ್ಳೂರು ಹಾಜರಿದ್ದರು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೈಟಾನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟ್ ಮಾಡಿದ ಸೂಪರ್ ಗಿಲ್ಲಿಸ್ ತಂಡವು ಶರೀಫ್ ಮತ್ತು ರಾಜಿಕ್ ಅವರ ಬ್ಯಾಟಿಂಗ್ ನೆರವಿನಿಂದ ೫ ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೪೮ ರನ್‌ಗಳನ್ನು ಗಳಿಸಿತು.

ಈ ಮೊತ್ತವನ್ನು ಬೆನ್ನಟ್ಟಿದ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಜಲೀಲ್ ಮತ್ತು ಜಾಫರ್ ಅವರ ಬ್ಯಾಟಿಂಗ್ ಪ್ರದರ್ಶನದಿಂದ ೪ ಓವರ್ ಮುಕ್ತಾಯಕ್ಕೆ ಗುರಿ ಮುಟ್ಟಿತು.

ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಜಾಫರ್ ಎಂಬಿ, ಪಂದ್ಯಾಟದ ಅತಿ ಹೆಚ್ಚು ಸ್ಕೋರರ್ ಆಗಿ ಸಜೀರ್, ಸರಣಿ ಶ್ರೇಷ್ಠ ಪ್ರಶಸ್ತಿ ಟೈಟಾನ್ಸ್ ತಂಡದ ಜಲೀಲ್, ಉತ್ತಮ ಕ್ಷೇತ್ರ ರಕ್ಷಕನಾಗಿ ಯೂನಸ್ ಜಾಂಗೋ, ಉತ್ತಮ ವಿಕೆಟ್ ಕೀಪರ್ ಶರೀಫ್ ಎಂಎA, ಉತ್ತಮ ಬೌಲರ್ ಆಗಿ ಆನಂದ್, ಆಕರ್ಷಕ ಅರ್ಧ ಶತಕ ಸಿಡಿಸಿದ ಬ್ಯಾಟ್ಸö್ಮನ್ ಕರೀಂ, ತೀರ್ಪುಗಾರರಾಗಿ ಹನೀಫ್ ಮಡಿಕೇರಿ, ಸತ್ತಾರ್ ಫ್ರೀಡಂ, ಕಿರಣ್ ಕಾರ್ಯಪ್ಪ ನೆಲಚಂಡ, ಸ್ಕೋರರಾಗಿ ಆಶಿಮ್, ವೀಕ್ಷಕ ವಿವರಣೆಗಾರರಾಗಿ ಹರ್ಷದ್ ಸಿಎಂ, ಕೆಪಿಎಲ್ ಸ್ಥಾಪಕ ಜುನೈದ್ ಕೆಎಂ, ಕಾರ್ಯದರ್ಶಿ ಇಕ್ಬಾಲ್, ಸಮೀರ್, ಅಜರ್, ಯೂನಸ್, ಹಾಜರಿದ್ದರು.

ಈ ಸಂದರ್ಭ ಮುಂದಿನ ವರ್ಷ ನಡೆಯುವ ಏಳನೇ ಆವೃತ್ತಿಯ ಕೆಪಿಎಲ್ ಕ್ರೀಡಾಕೂಟದ ಧ್ವಜವನ್ನು , ರಹೀಂ,ಅಜೀಜ್, ರಜಾಕ್, ಸತ್ತಾರ್ ರವರಿಗೆ ಕೆಪಿಎಲ್ ಆಡಳಿತ ಮಂಡಳಿ ಹಸ್ತಾಂತರಿಸಲಾಯಿತು.

-ನೌಫಲ್ ಕಡಂಗ