ಮಡಿಕೇರಿ, ಫೆ. ೯: ಪ್ರಸ್ತುತ ಮಡಿಕೇರಿಯಲ್ಲಿ ತಲೆ ಎತ್ತಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್) ನ ಜಾಗದ ವಿಚಾರದಲ್ಲಿ ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಮ್ ಅವರ ಪಾತ್ರ ಹೆಚ್ಚಿರುವದಾಗಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ತಿಳಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು ಮ್ಯೂಸಿಯಂನ ಯೋಜನೆ ರೂಪುಗೊಂಡಿತ್ತಾದರೂ ಈ ಜಾಗಕ್ಕೆ ಸಂಬAಧಿಸಿದAತೆ ಅಡೆ - ತಡೆಗಳಿದ್ದರಿಂದ ಹಲವು ವರ್ಷ ಇದು ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯ ಪ್ರಮುಖರು ತಾವು ಸೇರಿದಂತೆ ಸಚಿವರ ಗಮನಕ್ಕೆ ಇದನ್ನು ತಂದಿದ್ದರು. ಇದರಂತೆ ಆ ಸಂದರ್ಭ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ಕೊಡಗು ಜಿಲ್ಲಾಧಿಕಾರಿಯಾಗಿದ್ದ ಆರ್.ವಿ. ಡಿಸೋಜ ಅವರನ್ನು ಒಳಗೊಂಡAತೆ ಬೆಂಗಳೂರಿನಲ್ಲಿ ಹಲವು ಸಭೆಯನ್ನು ಸೀತಾರಾಮ್ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. (ಮೊದಲ ಪುಟದಿಂದ) ಇದರ ಪರಿಣಾಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರಾದೇಶಿಕ ಸಾರಿಗೆ ಇಲಾಖೆಗೆ ನೀಡಬೇಕಾಗಿದ್ದ ಮೊತ್ತವನ್ನು ನಿಗದಿಪಡಿಸಿ ಅದನ್ನು ಪಾವತಿಸುವದರೊಂದಿಗೆ ಪ್ರಾದೇಶಿಕ ಸಾರಿಗೆ ಇಲಾಖೆಯ ಸುಪರ್ದಿಯಲ್ಲಿದ್ದ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪಡೆದುಕೊಳ್ಳಲಾಯಿತು ಎಂದು ಸ್ಮರಿಸಿರುವ ಹರೀಶ್ ಬೋಪಣ್ಣ ಅವರು ಸೀತಾರಾಮ್ ಅವರ ಪ್ರಯತ್ನ ಈ ಸಂದರ್ಭದಲ್ಲಿ ಉಲ್ಲೇಖನೀಯವಾಗಿದೆ ಎಂದು ತಿಳಿಸಿದ್ದು, ಇದೀಗ ಯೋಜನೆ ಕಾರ್ಯಗತವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.