ನಾಪೋಕ್ಲು, ಫೆ. ೯: ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆ ಮುಂಭಾಗದಲ್ಲಿ ಟಿಪ್ಪುವಿನಿಂದ ಹತ್ಯೆಯಾದ ಕೊಡವ ದಿವ್ಯಾತ್ಮಗಳಿಗೆ ಸಿಎನ್‌ಸಿ ಸಂಘಟನೆ ವತಿಯಿಂದ ಮೀದಿ ಇಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ,, ಕೊಡವರಿಗೆ ಶಾಪ ಇದೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣ ದುರ್ಮರಣದಲ್ಲಿ ಮೃತಪಟ್ಟ ಕೊಡವ ದಿವ್ಯಾತ್ಮಗಳನ್ನು ನೆನೆಯದಿರುವದು. ಕೊಡವರು ಸೂರ್ಯ, ಚಂದ್ರ, ಭೂಮಿತಾಯಿ ಮತ್ತು ಕಾರಣರನ್ನು ನೆನೆಸಿಕೊಳ್ಳಬೇಕು. ೨೦೧ ವರ್ಷಗಳ ಕಾಲ ಮಡಿಕೇರಿ ಮತ್ತು ನಾಲ್ಕುನಾಡು ಅರಮನೆಯಲ್ಲಿ ಇದ್ದುಕೊಂಡು ಕೊಡವರ ಮೇಲೆ ಆಕ್ರಮಣ ಮತ್ತು ಹತ್ಯಾಕಾಂಡ ಮಾಡಿಕೊಂಡು ಸುಮಾರು ೧,೫೦೦ ಕುಟುಂಬ ಇದ್ದ ಕೊಡವರನ್ನು ೮೪೨ ಕುಟುಂಬಗಳನ್ನಾಗಿಸಿ ಜನಸಂಖ್ಯೆ ಕಡಿಮೆಯಾಗಲು ಈ ಹಿಂದೆ ಕೊಡಗನ್ನು ಆಳಿದ ಕೆಲವು ರಾಜರು ಕಾರಣರಾಗಿದ್ದಾರೆ. ಇವರು ಎಂದಿಗೂ ಆದರ್ಶವಾಗಲು ಸಾಧ್ಯವಿಲ್ಲ. ಇದಕ್ಕಾಗಿ ಈ ಸಂದರ್ಭ ನಮ್ಮ ಹಿರಿಯರನ್ನು ನೆನೆಸಿಕೊಂಡು ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಇದಕ್ಕೆ ಪರಿಹಾರವಾಗಿ ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದರು.

ಈ ಸಂದರ್ಭ ಅಪ್ಪಾರಂಡ ಶ್ರೀನಿವಾಸ್, ಅರೆಯಡ ಗಿರೀಶ್, ಅಪ್ಪಾರಂಡ ಪ್ರಕಾಶ್, ಪೂವಣ್ಣ, ಪ್ರಸಾದ್, ವಿಜು, ತಿಮ್ಮಯ್ಯ ಮತ್ತು ಅರೆಯಡ ಸಾವನ್ ಇದ್ದರು.