ಗೋಣಿಕೊಪ್ಪಲು, ಫೆ. ೯: ದ. ಕೊಡಗಿನಲ್ಲಿ ನಿರಂತರ ಹುಲಿ ದಾಳಿ ನಡೆಯುತ್ತಿದ್ದು ಜಾನುವಾರುಗಳನ್ನು ನಂಬಿ ಜೀವನ ಸಾಗಿಸುತ್ತಿರುವ ರೈತನಿಗೆ ದಿಕ್ಕೆ ತೋಚದಂತಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಕಿರುಗೂರು ಪಂಚಾಯಿತಿ ವ್ಯಾಪ್ತಿಯ ರೈತ ತಿಮ್ಮಯ್ಯ ಅವರ ಕರುವಿನ ಮೇಲೆ ಹುಲಿಯು ದಾಳಿ ನಡೆಸಿತು.
ನಂತರದ ದಿನದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕರು ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಉತ್ತಪ್ಪ, ಆರ್.ಎಫ್.ಒ. ರಾಜಪ್ಪ, ದಿವಾಕರ್ ಹಾಗೂ ಸಿಬ್ಬಂದಿಗಳು ಪರಿಹಾರ ಚೆಕ್ ನೀಡಲು ಆಗಮಿಸಿದ್ದರು.
ವಿಷÀಯ ತಿಳಿದ ಗ್ರಾಮಸ್ಥರು ರೈತ ಸಂಘದ ಮುಖಂಡರೊAದಿಗೆ ಜಮಾಹಿಸಿ ಆಗಮಿಸಿದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ದ.ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಯುತ್ತಿದ್ದರೂ, ಹುಲಿಯ ಸೆರೆಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡುಬAದಿದೆ. ಕೂಡಲೇ ಹುಲಿ ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು ತಪ್ಪಿದ್ದಲ್ಲಿ ಮುಂದೆ ಇಲಾಖೆಯ ಅಧಿಕಾರಿಗಳನ್ನು ಘಟನೆ ನಡೆದ ಸಂದರ್ಭ ಭೇಟಿ ನೀಡುವ ವೇಳೆ ರೈತರು ಒಟ್ಟಾಗಿ ಅಧಿಕಾರಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಬೇಕಾಗುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಮುಂದೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭ ರೈತ ಸಂಘದ ಪ್ರಮುಖರಾದ ಆಲೆಮಾಡ ಮಂಜುನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಸುಭಾಷ್, ಆಲೆಮಾಡ ಸುಧೀರ್, ಗ್ರಾ.ಪಂ. ಸದಸ್ಯರಾದ ಪೆಮ್ಮಂಡ ಸುಮಿತ್ರಾ ಅಪ್ಪಿ, ಚಿರಿಯಪಂಡ ರೇಖಾ ಪೆಮ್ಮಯ್ಯ, ಪ್ರಮುಖರಾದ ಗಾಡಂಗಡ ಉತ್ತಯ್ಯ, ಪೆಮ್ಮಂಡ ಉಮೇಶ್, ಅಪ್ಪಿ, ದಯಾನಂದ, ಆಲೆಮಾಡ ತಿಮ್ಮಯ್ಯ, ಜಯಪ್ರಕಾಶ್, ಹೆಚ್.ಪಿ. ಅಶೋಕ್, ತೀತರಮಾಡ ರಾಜ, ಮಲಚೀರ ಗಿರೀಶ್, ಅನಿಲ್, ಪುಳ್ಳಂಗಡ ಕೀರ್ತನ್, ಚೊಟ್ಟೆಕಾಳಪಂಡ ಮನು ಮುಂತಾದವರು ಭಾಗವಹಿಸಿದ್ದರು.
- ಹೆಚ್.ಕೆ.ಜಗದೀಶ್