ಶನಿವಾರಸಂತೆ, ಫೆ. ೯: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆ ಸಭೆಯಲ್ಲಿ ಮಾಹಿತಿಯನ್ನು ನೀಡದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಅಧಿಕವಾಗಿದ್ದ ಮಹಿಳೆಯರು ಸಭೆಯನ್ನು ತೊರೆದು ಹೊರ ನಡೆದರು.
ಸಭೆಯಲ್ಲಿ ಪ್ರಮುಖರಾದ ಮುಡ್ತೆಗೌಡ, ದಿನೇಶ್, ವಸಂತ ಇತರರು ಆಕ್ಷೇಪ ವ್ಯಕ್ತಪಡಿಸಿ ಸಭೆಯನ್ನು ಮುಂದೂಡುವAತೆ ಒತ್ತಾಯಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾಧಿಕಾರಿ ಎಂ.ಎA. ವಿಕ್ರಮ್ ಸಭೆಯನ್ನು ಮುಂದೂಡಲು ಒಪ್ಪಿಗೆ ನೀಡಿದರು. ಸಭೆಯಲ್ಲಿ ಅಂಗನವಾಡಿ ಶಿಕ್ಷಕಿಯರು, ನೀರು ನಿರ್ವಾಹಕರು, ಶಾಲಾ ಶಿಕ್ಷಕರು ಹಾಜರಿದ್ದು, ಗ್ರಾಮೀಣ ಜನತೆಗೆೆ ಆಹ್ವಾನವಿರಲಿಲ್ಲ.
ಸಭೆಯಲ್ಲಿ ನೂತನ ಸದಸ್ಯರಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್ ಉಪಸ್ಥಿತರಿದ್ದರು.