ಕೂಡಿಗೆ, ಫೆ. ೯: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ಮೊದಲ ಹಂತದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ನಡೆಯಿತು.

ಅವಿರೋಧವಾಗಿ ಅಧ್ಯಕ್ಷೆಯಾಗಿ ರೂಪ ಮಹೇಶ್, ಉಪಾಧ್ಯಕ್ಷರಾಗಿ ಎಂ.ಟಿ. ಬೇಬಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಮಹಿಳಾ ಮೀಸಲು ಸ್ಥಾನವಾಗಿದ್ದರಿಂದ ಒಬ್ಬರೇ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಬಿ ವರ್ಗ. ಸಿದ್ದಲಿಂಗಪುರ ಗ್ರಾಮದ ಬೇಬಿಯಣ್ಣ ನಾಮಪತ್ರವನ್ನು ಸಲ್ಲಿಸಿದ್ದರು. ಚುನಾವಣಾ ಅಧಿಕಾರಿಯಾಗಿ ಕುಶಾಲನಗರದ ಆರ್.ಎಂ.ಸಿ. ಕಾರ್ಯದರ್ಶಿ ಅವರು ಕರ್ತವ್ಯ ನಿರ್ವಹಿಸಿದರು.

ವಿಜೇತರು ಸಂಭ್ರಮ ಆಚರಣೆ ಮಾಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀಣಾ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಕೃಷ್ಣ ಗೌಡ, ನಿರ್ದೇಶಕರಾದ ಚಂದ್ರಪ್ಪ, ಜಗದೀಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಬಿ. ದೇವರಾಜು, ಟಿ.ಸಿ. ಶಿವಕುಮಾರ್, ತೀರ್ಥ ಕುಮಾರ್, ಸವಿತ, ನಿಂಗಜಮ್ಮ, ಶೋಭ, ಮಹದೇವ, ಯೋಗೇಂದ್ರ್ ಹಾಜರಿದ್ದರು.