ಕಣಿವೆ, ಫೆ. ೯ : ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಚೆಲುವರಾಜು ೧೩ ಮತಗಳಿಂದ ಆಯ್ಕೆಯಾದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಪದ್ಮಾವತಿ ಕೇವಲ ೯ ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಮ್ಮ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಪ್ರಮುಖರಾದ ಜಿ.ಎಲ್.ನಾಗರಾಜು, ಎಂ.ಎನ್.ಕುಮಾರಪ್ಪ, ಕೆ.ಜಿ.ಮನು, ಉಮಾಶಂಕರ್, ಕೃಷ್ಣಪ್ಪ, ಜಿಪಂ ಸದಸ್ಯೆ ಮಂಜುಳಾ ಮೊದಲಾದವರಿದ್ದರು.