ನಾಪೋಕ್ಲು, ಫೆ. ೯: ಸಮೀಪದ ಪಾಲೂರು ಗ್ರಾಮದ ಎಡಿಕೇರಿ ಗೀತಾ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಕೊಡಗಿನ ಆಚಾರ ವಿಚಾರಗಳು ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.

ಇತ್ತೀಚೆಗೆ ನಡೆದ ವಿಶ್ವವಿದ್ಯಾನಿಲಯದ ೫೫ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿಹೆಚ್ ಡಿ ಪದವಿ ಪ್ರಧಾನ ಮಾಡಲಾಯಿತು. ಕುಲಪತಿ ವೇಣುಗೋಪಾಲ್ ಕೆ.ಆರ್. ಪದವಿ ಪ್ರದಾನ ಮಾಡಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿರುವ ಡಾ. ನಾಗಭೂಷಣ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಲಾಗಿತ್ತು.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಡಿಕೇರಿ ಗೀತಾ ಕಾಟಕೇರಿ ಗ್ರಾಮದ ಅಚ್ಚಲ್ಪಾಡಿ ಲಕ್ಷಕುಮಾರ್ ಅವರ ಪತ್ನಿ. ಬೆಂಗಳೂರಿನ ಇಂಡೋ ಏಷ್ಯನ್ ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.