ವೀರಾಜಪೇಟೆ, ಫೆ. ೯: ನಗರ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಉತ್ಸವ ತಾ. ೧೧ ರಂದು (ನಾಳೆ) ನಡೆಯಲಿದೆ. ೨೨೫ ವರ್ಷಗಳ ಇತಿಹಾಸವನ್ನು ಹೊಂದಿರುವ ಸಂತ ಅನ್ನಮ್ಮ ದೇವಾಲಯವು ಕೊಡಗಿನಲ್ಲೇ ಪ್ರಾಚೀನ ಐತಿಹಾಸಿಕ ದೇವಾಲಯವಾಗಿದೆ.

ವಾರ್ಷಿಕೋತ್ಸವದಂದು ಸಂಜೆ ೫ ಗಂಟೆಗೆ ಮೈಸೂರು ಧರ್ಮಾಧ್ಯಕ್ಷರಾದ ಡಾ. ಕೆ.ಎ. ವಿಲಿಯಂರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

ಮೈಸೂರು ಮತ್ತು ಕೊಡಗು ಭಾಗದ ವಿವಿಧ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಕೋವಿಡ್ -೧೯ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ರೆ.ಫಾ. ಮದಲೈಮುತ್ತು ಅವರು ತಿಳಿಸಿದ್ದಾರೆ.