ಕೂಡಿಗೆ ಫೆ ೯ : ಶ್ರೀಗಂಧದ ಮರವನ್ನು ಕಡಿದು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಅರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕುಳ್ಳಯ್ಯ ಎಂಟು ವರ್ಷಗಳ ಬಳಿಕ ಬಂಧಿಯಾದ ಆರೋಪಿ. ಕಳೆದ ಎಂಟು ವರ್ಷಗಳÀ ಹಿಂದೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಜೇನುಕಲ್ಲು ಬೆಟ್ಟದಲ್ಲಿ ಶ್ರೀಗಂಧದ ಮರವನ್ನು ಕಡಿದು ಸಾಗಾಟ ಮಾಡುವ ವೇಳೆ ದಾಳಿ ನಡೆಸಿದ್ದ ಪೊಲೀಸರಿಂದ ಆರೋಪಿತ ತಪ್ಪಿಸಿಕೊಂಡಿದ್ದ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಶರವಣದಾಸ್ ರೆಡ್ಡಿ, ಉಪ ಸಹಾಯಕ ನಿರೀಕ್ಷಕ ಹೆಚ್.ಎಸ್. ರವಿ, ಪೊಲೀಸ್ ಸಿಬ್ಬಂದಿ ಶಫೀನ್ ಅಹಮದ್ ಇದ್ದರು.