ಶನಿವಾರಸಂತೆ, ಫೆ. ೮: ಶನಿವಾರಸಂತೆ ಹೋಬಳಿ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರ ಗ್ರಾಮದ ಸ.ನಂ. ೨೬ರ ೦.೭೨ ಎಕರೆ ಪೈಸಾರಿ ಕೆರೆ ಒತ್ತುವರಿಯನ್ನು ಶನಿವಾರಸಂತೆ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ ಅವರಿಗೆ ಹಸ್ತಾಂತರಿಸಿದರು. ಉಪತಹಶೀಲ್ದಾರ್ ಕೆ.ಜೆ. ಮಧುಸೂಧನ, ಕಂದಾಯ ಪರಿವೀಕ್ಷಕ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ವಾಣಿ, ಗ್ರಾಮ ಸಹಾಯಕರಾದ ಯೋಗೇಶ್, ಮಹೇಶ್ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.