ಜನರಲ್ ತಿಮ್ಮಯ್ಯ ಸಂಗ್ರಹಾಲಯವು, ಭಾರತದ ಸೈನ್ಯದ ಇತಿಹಾಸದಲ್ಲಿ ಅತ್ಯುತ್ತಮ ಸೈನಿಕರಲ್ಲಿ ಒಬ್ಬರಾದ ಜನರಲ್ ತಿಮ್ಮಯ್ಯ ಅವರ ಅಸಾಧಾರಣ ಗುಣಲಕ್ಷಣ ಮತ್ತು ಅವರು ದೇಶಕ್ಕೆ ನೀಡಿರುವ ಕೊಡುಗೆಯ ವಿಶೇಷ ಅಂಶಗಳನ್ನು ಸಂರಕ್ಷಿಸಿದೆ. ಈ ಹಿಂದೆ ತಿಮ್ಮಯ್ಯ ಅವರ ನಿವಾಸವಾಗಿದ್ದ ‘ಸನ್ನಿಸೈಡ್’, ನಮ್ಮ ಸೇನಾ ಪಡೆಯ ವೈಶಿಷ್ಟö್ಯಗಳನ್ನು ಉತ್ತಮವಾದ ರೀತಿಯಲ್ಲಿ ಬಿಂಬಿಸಿದೆ. ಸೇನಾ ದಿಗ್ಗಜರಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರುಗಳಂತಹ ಸೇನಾ ನಾಯಕರನ್ನು ದೇಶದ ಸೇನಾ ಪಡೆಗೆ ನೀಡಿರುವ ಗೌರವ ಹಾಗೂ ಹೆಮ್ಮೆ, ಕೊಡಗು ಜಿಲ್ಲೆಯದ್ದಾಗಿದೆ. ಈ ಸಂಗ್ರಹಾಲಯವು ಯುವಜನರಿಗೆ ಸ್ಫೂರ್ತಿಯಾಗಿ ತಿಮ್ಮಯ್ಯ ಅವರ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗಲು ಸಹಕಾರಿಯಾಗಲಿದೆ ಎಂದು ರಾಷ್ಟçಪತಿ ರಾಮನಾಥ್ ಕೋವಿಂದ್ ತಮ್ಮ ಹಸ್ತಾಕ್ಷರದಲ್ಲಿ ಸಂಗ್ರಹಾಲಯದಲ್ಲಿನ ‘ಡೈರಿ’ಯಲ್ಲಿ ಬರೆದಿದ್ದಾರೆ.ಜನರಲ್ ತಿಮ್ಮಯ್ಯ ಅವರ ಉತ್ತಮ ವೃತ್ತಿಪರ, ಸೈನಿಕ ಹಾಗೂ ಅಧಿಕಾರ ಗುಣ ಗಳನ್ನು ನೆನಪಿಸಿ ಕೊಳ್ಳುವ ಒಂದು ಐತಿಹಾಸಿಕ ಸಂದರ್ಭ ಇದಾಗಿದೆ. ಈ ಮಹಾ ಸೇನಾ ನಾಯಕ ಪ್ರತಿಯೊಬ್ಬ ಭಾರತೀಯ ಸೈನಿಕನ ಹೃದಯದಲ್ಲಿ ಅಜರಾಮರವಾಗಿದ್ದಾರೆ.
ಭವಿಷ್ಯದಲ್ಲಿ ಪ್ರತಿಯೊಬ್ಬರಿಗೂ ಅವರು ಸ್ಫೂರ್ತಿಯಾಗಲಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಮ್ಮ ಹಸ್ತಾಕ್ಷರದಲ್ಲಿ ‘ಡೈರಿ’ಯಲ್ಲಿ ಬರೆದಿದ್ದಾರೆ.