ಪ್ರತಿಯೊಂದು ಕಾರ್ಯದಲ್ಲೂ ಜಲತತ್ವಕ್ಕೆ ಪ್ರಾಮುಖ್ಯತೆ ಕೊಡುವ ಕೊಡವರು ನಡುಮನೆ ದೀಪ ಹಚ್ಚಿ ತಮ್ಮ ಮದುವೆ, ಸಾವು ಹಬ್ಬ ಹೀಗೆ ಎಲ್ಲಾ ಕಾರ್ಯಗಳಲ್ಲೂ ಕುಲದೇವತೆಯಾದ ಕಾವೇರಿಯಲ್ಲಿ ಮೊದಲಿಗೆ ತಮ್ಮ ತಪ್ಪಿಗೆಲ್ಲಾ ಕ್ಷಮೆ ಕೇಳಿ (ತಪ್ಪಡ್ಕ) ತಮ್ಮ ಕಾರ್ಯಗಳಲ್ಲಿ ಜಯ ಸಿಗುವಂತೆ ಮಾಡಬೇಕೆಂದು ಪ್ರಾರ್ಥಿಸುತ್ತಾರೆ. ಸಹ್ಯಾದ್ರಿಯೊಳುದಿಸಿದ ಮಹಾ ನದಿಯಾದ ಕಾವೇರಿ ವೇದಗಳಲ್ಲಿ ಮರುದ್ವೃದೆ ಎಂದು ಪ್ರತೀತವಾಗಿ ಅನೇಕ ಶ್ಲೋಕಗಳಲ್ಲಿ ಉಕ್ತವಾಗಿದ್ದಾಳೆ. ಕಾವೇರಿಯ ಮಹಿಮೆ ರಾಮಾಯಣ, ಮಹಾಭಾರತಗಳಲ್ಲೂ ಉಕ್ತವಾಗಿದೆ.
ಸರ್ವ ಚೈತನ್ಯ ಸ್ವರೂಪಿಣಿ
ಸರ್ವ ಮಂಗಳೆ ಸರ್ವತೋಮುಖೆ
ಸರ್ವ ಮಂತ್ರಧಾರೆ ಸರ್ವೋಪದ್ರವಾಪಹಾರೆ
ಪೂರ್ವದಲ್ಲಿ ನದಿಗಳೊಳಗೆಯ
ಪೂರ್ವಮಾಗಿರ್ದೀಕೇಗಂ ಸರಿ
ಪೂರ್ವ ಸೃಷ್ಟಿಯೊಳಿಗೆಲ್ಲ ಸತ್ಯವಿಂದೆದನಾ ಮುನಿಪ (ಕವಿರಂಗ ವಿರಚಿತ)
ಸ್ಕಾಂದ ಪುರಾಣದ ಒಂದು ಭಾಗ ಕಾವೇರಿ ಪುರಾಣವಾಗಿದೆ. ಅದರಲ್ಲಿ ದೇವದಾನವರಲ್ಲಿ ಅಮೃತಕ್ಕಾಗಿ ಕಾದಾಟವಾದ ಸಮಯದಲ್ಲಿ ಶ್ರೀಮನ್ನಾರಾಯಣನ ಮೋಹಿನಿ ಅವತಾರ ರೂಪವು ಪ್ರತ್ಯಕ್ಷವಾದಾಗ ಲಕ್ಷಿö್ಮÃ ದೇವಿಯ ಇಚ್ಛೆಯಂತೆ, ಶಕ್ತಿ ಸ್ವರೂಪಿಣಿಯಾದ ಪಾರ್ವತಿ ದೇವಿ ತನ್ನ ದಿವ್ಯಶಕ್ತಿಯಿಂದ ಮಗುವಾಗಿ ಅವತಾರವೆತ್ತಿ, ಲೋಪಾಮುದ್ರೆ ಎಂಬ ಹೆಸರಿನಲ್ಲಿ ಪ್ರತ್ಯಕ್ಷವಾಗಿ, ಮೋಹಿನಿಯೊಡನೆ ತಾನು ದೇವರಿಗೆ ಅಮೃತ ಸಿಗಲು ಸಹಾಯ ಮಾಡುತ್ತಾಳೆ. ಈ ಸೃಷ್ಟಿ ಉತ್ಪತ್ತಿಯಾದ ಕಾಲದಲ್ಲಿ ಶ್ರೀಮನ್ನಾರಾಯಣನ ನಾಭಿ ಕಮಲದಿಂದ ಬ್ರಹ್ಮನು ಸೃಷ್ಟಿಯಾದ ಕಾಲದಲ್ಲಿ ಆದಿ ನಾರಾಯಣನ ಕರ್ಣ ಮಲದಿಂದ ಹುಟ್ಟಿದ ಮದುಕೈಟಬ ರಾಕ್ಷಸರು ಬ್ರಹ್ಮನ ಮೇಲೆರೆಗಿದಾಗ ಶಕ್ತಿ ಸ್ವರೂಪಿಣಿಯಾದ ಆದಿ ಮಾಯೆಯು ಮದುಕೈಟಬರನ್ನು ಸಂಹಾರ ಮಾಡಿದ ಕಾಲದಲ್ಲಿ, ಬ್ರಹ್ಮದೇವನು ತನ್ನ ಮಗಳಾಗಿ ನೀನು ಹುಟ್ಟಬೇಕೆಂದು ವರ ಕೇಳಿದಾಗ, ಆದಿ ಮಾಯೆಯು ನಿನ್ನ ದತ್ತು ಮಗಳಾಗಿ ಹುಟ್ಟುತ್ತೇನೆಂದು ವರ ಕೊಟ್ಟಳಂತೆ. ಅದೇ ಪ್ರಕಾರವಾಗಿ ಸಮುದ್ರ ಮಥನ ಕಾಲದಲ್ಲಿ ಮಹಾವಿಷ್ಣು ಮೋಹಿನಿ ಅವತಾರ ವೆತ್ತಿದ್ದ ಸಂದರ್ಭದಲ್ಲಿ ಶಕ್ತಿ ಸ್ವರೂಪಿಣಿಯಾದ ಆದಿ ಮಾಯೆಯು ಲೋಪಾಮುದ್ರೆಯಾಗಿ ಅವತಾರವೆತ್ತುತ್ತಾಳೆ. ಯಾವುದೊಂದು ಕೊರತೆಯೂ ಇಲ್ಲದೆ ಆ ಮಾಹಾಮಾಯೆಯ ಸುಂದರ ಮಗುವಿನ ಸ್ವರೂಪವನ್ನು ಶ್ರೀಮನ್ನಾರಾಯಣ ‘‘ಲೋಪಾಮುದ್ರೆ’’ ಎಂದು ಕರೆದನೆಂದು ಪುರಾಣ ಕತೆಗಳು ಹೇಳುತ್ತವೆ. ದೇವತೆಗಳಿಗೆ ಅಮೃತ ಕಳಸವನ್ನು ದೊರಕಿಸಿ ಕೊಟ್ಟಾದ ನಂತರ ಮೋಹಿನಿ ಕಲ್ಲಾದಳು. ಲೋಪಾಮುದ್ರೆಯನ್ನು ಲಕ್ಷಿö್ಮÃದೇವಿಯು ಬ್ರಹ್ಮನಿಗೆ ದತ್ತು ಪುತ್ರಿಯಾಗಿ ಕೊಟ್ಟಳೆಂದು ಸ್ಕಾಂದ ಪುರಾಣವು ಹೇಳುತ್ತದೆ.
ಕೊಡವರು ಈ ಕಥೆಯನ್ನು ತಮ್ಮ ಜನಪದ ಶೈಲಿಯಲ್ಲಿ ಕಾವೇರಿ ಪುರಾಣದಲ್ಲಿ ಹೀಗೆಂದು ಹಾಡುತ್ತಾರೆ.
ದನ್ವಂತರಿ ಪುಟ್ಟಿತ್ - ದನ್ವಂತರಿ ಹುಟ್ಟಿ
ಪಾಕಡತಿಂಜೆದ್ದಿತ್ - ಸಮುದ್ರದಿAದ ಮೇಲೆದ್ದು
ಅಮೃತೆÆ್ತÃಡೆ ಬಂದಿತ್ - ಅಮೃತ ಸಮೇತವಾಗಿ ಬಂದು
ಪೊAಗಲಶನ ಪಾತ್ರನ - ಚಿನ್ನದ ಆ ಪಾತ್ರವನ್ನು
ಅಲ್ಲಿಕೋಂದ್ ಬೆಕ್ಕಣೆ - ಅಲ್ಲಿ ತಂದು ಇಟ್ಟಾಗ
ರಾಕ್ರಸಿಯ ದೇಬುವ - ರಾಕ್ಷಸರೂ ದೇವರೂ
ನಾಕ್ ನಾಕ್‌ಂದೆಣ್ಣಿತ್ - ನನಗೆ-ನನಗೆ ಎನ್ನುತ್ತಾ
ಕೊರ್ ಪಡೆ ಪೊತ್ತಿತ್ತ್ - ಕಾದಾಟ ನಡೆಸಿದಾಗ
ರಾಕ್ರಸಿಯ ಗೆದ್ದತ್ - ರಾಕ್ಷಸರೇ ಗೆದ್ದರು
ರಾಕ್ರಸಿಯ ಗೆದ್ದಿತ್ - ರಾಕ್ಷಸರೇ ಗೆದ್ದು
ಪೊಂಗಲಶ ಕೊಂಡಿತ್ತ್-(ಅಮೃತ ಇರುವ) ಚಿನ್ನದ ಪಾತ್ರವನ್ನು ತೆಗೆದುಕೊಂಡು
ಅಲ್ಲಿAಜಿ ಪೊರಡಣೆ - ಅಲ್ಲಿಂದ ಹೊರಡಬೇಕಾದರೆ
ನಾರಾಯಣ ದೇವಯ್ಯ - ನಾರಾಯಣ ದೇವನು
ತಾನೆನ್ನ ಪಣಿ ಕೆಜ್ಜ - ತಾನೇನು ಮಾಡಿದನೆಂದರೆ
ಅಲ್ಲತೊAದು ಅಲ್ಲಲ್ಲ - ಅಲ್ಲದೆ ಇನ್ನೇನು ಅಲ್ಲ
ಆಣ್‌ರೂಪ ಬುಟ್ಟಿತ್ - ಗಂಡಸಿನ ರೂಪ ಬಿಟ್ಟು
ಮೋಹಿನಿರ ರೂಪಾಯಿ - ಮೋಹಿನಿಯ ರೂಪ ತಾಳಿ
ಪೊಣ್ಣಾಯಿತ್ ನಿಂದತ್ - ಹೆಣ್ಣಾಗಿ ನಿಂತನು
ಅಕ್ಕಣೆಕ್ ಚಂಙÆದಿ - ಅಷ್ಟರಲ್ಲಿ ಮಿತ್ರನೇ
ಲಕ್ಷಿö್ಮÃದೇವಿ ಮಾತಾಯಿ - ಲಕ್ಷಿö್ಮÃದೇವಿ ಮಹಾತಾಯಿ
ಪಾರ್ವತಮ್ಮೆ ದೇವಿರ - ಪಾರ್ವತಿ ದೇವಿಯ
ಮಮ್ಮಾಯತವತಾರ - ಮಾಯದ ಅವತಾರವಾದ
ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನ್ನು
ಕೂಟ್‌ಕ್ ತೊಣೆಯಾಯಿ - ಮೋಹಿನಿಗೆ ಜೊತೆಯಾಗಿ
ಅಲ್ಲಿಕ್ ಅಯಿಚಿತ್ - ಅಲ್ಲಿಗೆ ಕಳುಹಿಸಿದಳು
ದೇವಿಯಳು ದಂಡಾಳು - ಇಬ್ಬರು ದೇವಿಯರ
ಜೋಡೆತ್ತಿತ್ ಪೋಕಣೆ - ಒಪ್ಪುವಂತ ಜೋಡಿ ಅಲ್ಲಿಗೆ ಹೋಗಲು
ರಾಕ್ರಾಸಿಯ ಕಂಡಿತ್ - ರಾಕ್ಷಸರು ಇವರನ್ನು ಕಂಡು
ಚಾಯಿಕ್ ಮರುಳಾಯಿ - ಇವರ ಬೆಡಗಿಗೆ ಮರುಳಾಗಿ
ನಾಕ್ ನಾಕ್‌ಂದೆಣ್ಣಿತ್ - ನನಗೆ, ನನಗೆ ಎಂದು ಕಿತ್ತಾಡಲು
ಅಮೃತೋಡೆ ಪಾತ್ರನ - ಅಮೃತ ಸಮೇತವಾದ ಪಾತ್ರವನ್ನು
ದೇಬುವಕ್ ಕೊಡ್‌ತತ್ - ದೇವರಿಗೆ ಒದಗಿಸಿದರು
ದೇಬುವಕ್ ಕೊಡತಿತ್ - ದೇವರಿಗೆ ಕೊಟ್ಟು
ಅಲ್ಲಿಂಜ ಪೊರಟಿತ್ - ಅಲ್ಲಿಂದ ಹೊರಟು
ಸಹ್ಯಮಲಕ ಊರ್‌ಲ್ - ಸಹ್ಯ ಮಲಕ ಊರಿನಲ್ಲಿ
ಕಲ್ಲಾಯಿ ಮರಂಜಿತ್ - ಕಲ್ಲಾಗಿ ನಿಂತಳು (ಮೋಹಿನಿ)
ಕೇಳೋ ಕೇಳೋ ಬೆಂದುವೆ- ಕೇಳೋ ಕೇಳೊ ನೆಂಟನೇ
ಆ ಕಲ್ಲ್ನಡುಕಾಲೆ - ಆ ಕಲ್ಲಿನ ನಡುವಿಗೆ
ನುಗ್ಗಲು ಪೊರಡಲು - ಹೊರಟು ನುಗ್ಗಿ
ನುಗ್ಗಿತ್ ಪೊರಟಿನೋ - ಪ್ರದಕ್ಷಿಣೆ ಬಂದರೆ
ಕೆಜ್ಜ ಪಾಪ ಪೋಪಲ - ಮಾಡಿದ ಪಾಪ ಕಳೆಯುವುದು
ಮೇಲೆ ಪಾಪ ಪೊದ್ದುಲೆ-ಮತ್ತೆ ಯಾವ ಪಾಪವೂ ನಮ್ಮನ್ನು ಆಕ್ರಮಿಸುವುದಿಲ್ಲ
ಅನ್ನತ ನೆಲೆಯಾಪ - ಅಂತಹ ಪವಿತ್ರ ನೆಲೆಯದು
ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನ್ನು
ರಾಕ್ರಸಿಯ ದೇಬುವ - ರಾಕ್ಷಸರೂ ದೇವರೂ
ನಾಕ್ ನಾಕ್‌ಂದೆಣ್ಣಿತ್ - ನನಗೆ-ನನಗೆ ಎನ್ನುತ್ತಾ
ಕೊರ್ ಪಡೆ ಪೊತ್ತಿತ್ತ್ - ಕಾದಾಟ ನಡೆಸಿದಾಗ
ರಾಕ್ರಸಿಯ ಗೆದ್ದತ್ - ರಾಕ್ಷಸರೇ ಗೆದ್ದರು
ರಾಕ್ರಸಿಯ ಗೆದ್ದಿತ್ - ರಾಕ್ಷಸರೇ ಗೆದ್ದು
ಪೊಂಗಲಶ ಕೊಂಡಿತ್ತ್-(ಅಮೃತ ಇರುವ) ಚಿನ್ನದ ಪಾತ್ರವನ್ನು ತೆಗೆದುಕೊಂಡು
ಅಲ್ಲಿAಜಿ ಪೊರಡಣೆ - ಅಲ್ಲಿಂದ ಹೊರಡಬೇಕಾದರೆ
ನಾರಾಯಣ ದೇವಯ್ಯ - ನಾರಾಯಣ ದೇವನು
ತಾನೆನ್ನ ಪಣಿ ಕೆಜ್ಜ - ತಾನೇನು ಮಾಡಿದನೆಂದರೆ
ಅಲ್ಲತೊAದು ಅಲ್ಲಲ್ಲ - ಅಲ್ಲದೆ ಇನ್ನೇನು ಅಲ್ಲ
ಆಣ್‌ರೂಪ ಬುಟ್ಟಿತ್ - ಗಂಡಸಿನ ರೂಪ ಬಿಟ್ಟು
ಮೋಹಿನಿರ ರೂಪಾಯಿ - ಮೋಹಿನಿಯ ರೂಪ ತಾಳಿ
ಪೊಣ್ಣಾಯಿತ್ ನಿಂದತ್ - ಹೆಣ್ಣಾಗಿ ನಿಂತನು
ಅಕ್ಕಣೆಕ್ ಚಂಙÆದಿ - ಅಷ್ಟರಲ್ಲಿ ಮಿತ್ರನೇ
ಲಕ್ಷಿö್ಮÃದೇವಿ ಮಾತಾಯಿ - ಲಕ್ಷಿö್ಮÃದೇವಿ ಮಹಾತಾಯಿ
ಪಾರ್ವತಮ್ಮೆ ದೇವಿರ - ಪಾರ್ವತಿ ದೇವಿಯ
ಮಮ್ಮಾಯತವತಾರ - ಮಾಯದ ಅವತಾರವಾದ
ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನ್ನು
ಕೂಟ್‌ಕ್ ತೊಣೆಯಾಯಿ - ಮೋಹಿನಿಗೆ ಜೊತೆಯಾಗಿ
ಅಲ್ಲಿಕ್ ಅಯಿಚಿತ್ - ಅಲ್ಲಿಗೆ ಕಳುಹಿಸಿದಳು
ದೇವಿಯಳು ದಂಡಾಳು - ಇಬ್ಬರು ದೇವಿಯರ
ಜೋಡೆತ್ತಿತ್ ಪೋಕಣೆ - ಒಪ್ಪುವಂತ ಜೋಡಿ ಅಲ್ಲಿಗೆ ಹೋಗಲು
ರಾಕ್ರಾಸಿಯ ಕಂಡಿತ್ - ರಾಕ್ಷಸರು ಇವರನ್ನು ಕಂಡು
ಚಾಯಿಕ್ ಮರುಳಾಯಿ - ಇವರ ಬೆಡಗಿಗೆ ಮರುಳಾಗಿ
ನಾಕ್ ನಾಕ್‌ಂದೆಣ್ಣಿತ್ - ನನಗೆ, ನನಗೆ ಎಂದು ಕಿತ್ತಾಡಲು
ಅಮೃತೋಡೆ ಪಾತ್ರನ - ಅಮೃತ ಸಮೇತವಾದ ಪಾತ್ರವನ್ನು
ದೇಬುವಕ್ ಕೊಡ್‌ತತ್ - ದೇವರಿಗೆ ಒದಗಿಸಿದರು
ದೇಬುವಕ್ ಕೊಡತಿತ್ - ದೇವರಿಗೆ ಕೊಟ್ಟು
ಅಲ್ಲಿಂಜ ಪೊರಟಿತ್ - ಅಲ್ಲಿಂದ ಹೊರಟು
ಸಹ್ಯಮಲಕ ಊರ್‌ಲ್ - ಸಹ್ಯ ಮಲಕ ಊರಿನಲ್ಲಿ
ಕಲ್ಲಾಯಿ ಮರಂಜಿತ್ - ಕಲ್ಲಾಗಿ ನಿಂತಳು (ಮೋಹಿನಿ)
ಕೇಳೋ ಕೇಳೋ ಬೆಂದುವೆ- ಕೇಳೋ ಕೇಳೊ ನೆಂಟನೇ
ಆ ಕಲ್ಲ್ನಡುಕಾಲೆ - ಆ ಕಲ್ಲಿನ ನಡುವಿಗೆ
ನುಗ್ಗಲು ಪೊರಡಲು - ಹೊರಟು ನುಗ್ಗಿ
ನುಗ್ಗಿತ್ ಪೊರಟಿನೋ - ಪ್ರದಕ್ಷಿಣೆ ಬಂದರೆ
ಕೆಜ್ಜ ಪಾಪ ಪೋಪಲ - ಮಾಡಿದ ಪಾಪ ಕಳೆಯುವುದು
ಮೇಲೆ ಪಾಪ ಪೊದ್ದುಲೆ-ಮತ್ತೆ ಯಾವ ಪಾಪವೂ ನಮ್ಮನ್ನು ಆಕ್ರಮಿಸುವುದಿಲ್ಲ
ಅನ್ನತ ನೆಲೆಯಾಪ - ಅಂತಹ ಪವಿತ್ರ ನೆಲೆಯದು
ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನ್ನು
ಎಂದೂ, ಬ್ರಹ್ಮ ಸಮಾನ ಮಹಿಮನನ್ನು, ನಿಗಮಾಗಮನನ್ನು ಬಲ್ಲವರನ್ನು ಅರಸುತ್ತಿದ್ದೇನೆ ಎಂದೂ ಹೇಳುತ್ತಾಳೆ. ನಾನು ಒಂದು ಅಂಶದಲ್ಲಿ ಲೋಕೋಪಕಾರಕ್ಕಾಗಿ ನದಿಯಾಗುವೆ, ಮತ್ತೊಂದು ಅಂಶದಲ್ಲಿ ನಿಮ್ಮ ಸೇವೆ ಮಾಡುವೆ ಎಂದು ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ. ನಿತ್ಯ ನಗು ಮುಖದ, ನಯವಿನಯದಿಂದ ಕೂಡಿದ, ನೀಲಿ ಕಣ್ಣಿನ, ಕೆಂಪು ತುಟಿಯ, ಕಪ್ಪನೆಯ ದಟ್ಟ ಕೂದಲಿನ ಕಾವೇರಿ, ಅಗಸ್ತö್ಯ ಮಹಾಮುನಿಗಳನ್ನು ಕಂಡ ತಕ್ಷಣ ಎದ್ದು ನಿಂತು ತುಂಬಿದ ತಂಬಿಗೆಯಲ್ಲಿ ನೀರು ತಂದು ಮುನಿಗಳ ಪಾದವನ್ನು ತೊಳೆದು, ಕುಡಿಯಲು ನೀರನ್ನು ಕೊಟ್ಟಳೆಂದು ಸ್ಕಾಂದ ಪುರಾಣವು ವರ್ಣಿಸುತ್ತದೆ. ಕೊಡವ ಜನಾಂಗ ಇಂದಿಗೂ ಮನೆಗೆ ಬರುವ ಬಂಧು-ಮಿತ್ರರನ್ನು ಚೆಂಬಿನಲ್ಲಿ ನೀರು ತೆಗೆದುಕೊಂಡೇ ‘‘ಬಂದಿರಾ ?’’ ಎಂದು ಆಹ್ವಾನಿಸುವುದು ನೋಡಿದರೆ ಸ್ಕಾಂದ ಪುರಾಣದ ಈ ಸಾಲುಗಳಿಗೂ, ಕೊಡವರಿಗೂ ಅವಿನಾಭಾವ ಸಂಬAಧ ಇರುವಂತೆ ತೋರುತ್ತದೆ. ಕಾವೇರಿ ತಾಯಿಯೇ ಇಂತಹ ಒಂದು ಸಂಸ್ಕೃತಿಯನ್ನು ಕೊಡವರಿಗೆ ಕಲಿಸಿದಳೆಂದು ನಾವಿಲ್ಲಿ ತಿಳಿಯಬಹುದು. ಕಾವೇರಿ ತಾಯಿ ಮುಂದುವರಿದು, ಅಗಸ್ತö್ಯ ಮುನಿಗಳೊಡನೆ ತನ್ನ ಇಚ್ಛೆಯನ್ನು ಹೀಗೆಂದು ವ್ಯಕ್ತ ಪಡಿಸುತ್ತಾಳೆ; ನಾನು ಪವಿತ್ರ ಕಾವೇರಿ ನದಿಯಾಗಿ ಹರಿಯುವಾಗ ೧೪,೦೦೦ ನದಿ ತೀರ್ಥಗಳೂ ನನ್ನನ್ನು ಸೇರಲಿ, ನನ್ನಲ್ಲಿ ಯಾರು ಸ್ನಾನ ಮಾಡಿದರೂ ಅವರ ಪಾಪಗಳು ತೊಳೆಯಲಿ, ನಾನು ಹರಿಯುವ ದಡಗಳಲ್ಲಿರುವ ಮಣ್ಣು ಅಥವಾ ಭೂಮಿ ಫಲವತ್ತಾಗಿ ನಗುತ್ತಿರಲಿ, ನನ್ನ ಜಲದರ್ಶನ ಮಾತ್ರದಲ್ಲಿ ಮೋಕ್ಷವು ದೊರಕಲಿ, ಇದೆಲ್ಲಾ ಒಪ್ಪಿಗೆ ಯಾದರೆ ನಾನು ನಿನ್ನ ಪತ್ನಿಯಾಗುತ್ತೇನೆಂದಳು. ಅದಕ್ಕೆ ಮಹಾಮುನಿ ಅಗಸ್ತö್ಯರು ನನ್ನ ಕಮಂಡಲುವಿನಲ್ಲಿ ೧೪,೦೦೦ ನದಿ ತೀರ್ಥಗಳು ಇವೆ. ಕಾವೇರಿಯಾಗಿ ನೀನು ನನ್ನ ಕಮಂಡಲದಲ್ಲಿ ಸೇರು. ಲೋಪಾಮುದ್ರೆಯಾಗಿ ನನ್ನ ಹೆಂಡತಿಯಾಗಿರು ಎಂದು ಹೇಳುತ್ತಾರೆ.
ಕಮಂಡಲುವಿನಲ್ಲಿ ೧೪,೦೦೦ ಪವಿತ್ರ ನದಿ ತೀರ್ಥಗಳೊಡನೆ ಸೇರಿದ ಕಾವೇರಿ ಅಗಸ್ತö್ಯರಿಗೆ ನನ್ನನ್ನು ಬಿಟ್ಟು ಕ್ಷಣವೂ ಅಗಲಬಾರದು ಎಂದು ಹೇಳಿ ಅಗಲಿದ ಕ್ಷಣ ಮಾತ್ರದಲ್ಲಿ ನಾನು ಹೊಳೆಯಾಗಿ ದಕ್ಷಿಣ ದೇಶದ ಕಡೆ ಹೋಗಿ ಸಮುದ್ರ ಸೇರುತ್ತೇನೆಂದು ಹೇಳಿ, ಸಮಯಕ್ಕಾಗಿ ಕಾಯುತ್ತಿರುತ್ತಾಳೆ. ಪಾರ್ವತಿ ಸ್ವರೂಪಿಣಿಯಾದ ಕಾವೇರಿ ಅಗಸ್ತö್ಯ ಕಮಂಡಲುವಿನಲ್ಲಿ ಅಗಸ್ತö್ಯ-ಲೋಪಾಮುದ್ರೆಯರು ಸಹ್ಯಾದ್ರಿಯಲ್ಲಿ ಓಡಾಡಿಕೊಂಡಿದ್ದ ಸಂದರ್ಭದಲ್ಲಿ ಒಂದು ದಿನ ಅಗಸ್ತö್ಯರು ಇದು ಬ್ರಹ್ಮದೇವನ ಶೃಂಗ; ಅಲ್ಲಿ ತನ್ನ ಕಮಂಡಲವನ್ನಿಟ್ಟು ಕನಿಕೆಯಲ್ಲಿ ಸ್ನಾನ ಮಾಡಿ ಬರುತ್ತೇನೆಂದು ತನ್ನ ಶಿಷ್ಯವೃಂದಕ್ಕೆ ಹೇಳಿ ಸ್ನಾನಕ್ಕೆಂದು ಹೋಗುತ್ತಾರೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಕಾವೇರಿ, ಈಗ ನಾನು ಕಮಂಡಲುವಿನಿAದ ಹೊರ ಬಂದರೆ ನನ್ನ ತಪ್ಪು ಇರುವುದಿಲ್ಲ ಪಾಪವೂ ನನ್ನನ್ನು ಸುತ್ತಿಕೊಳ್ಳುವುದಿಲ್ಲ, ಅಗಸ್ತö್ಯರು ಮಾತಿಗೆ ತಪ್ಪಿದರು ಎಂದು ಲೋಕಕ್ಕೆ ಅರಿವಾಗುತ್ತದೆ ಎಂದುಕೊAಡಿರುವಾಗ, ಇಂದ್ರ ದೇವನು ಮೋಡವನ್ನು ಒಂದುಗೂಡಿಸಿ ಮಳೆಯನ್ನು ಬ್ರಹ್ಮಗಿರಿಗೆ ಸುರಿಸುತ್ತಾನೆ. ಗುಡುಗು ಸಿಡಿಲುಗಳ ರಭಸಕ್ಕೆ ಅಗಸ್ತö್ಯರ ಶಿಷ್ಯರು ಮರದ ಕೆಳಗೆ ಆಶ್ರಯ ಪಡೆಯುತ್ತಾರೆ. ಈ ಸಮಯದಲ್ಲಿ ಸುವಾಸನೆಯಿಂದ ಕೂಡಿದ ತಂಪನೆಯ ಗಾಳಿಯು ನೈರುತ್ಯದ ಕಡೆಗೆ ಬೀಸಿತು. ಕಾವೇರಿಯು ಅಗಸ್ತö್ಯರ ಕಮಂಡಲದಿAದ ಹೊರ ಬಂದು ಪ್ರವಾಹೋಪಾದಿಯಲ್ಲಿ ಮುನ್ನುಗ್ಗಿ ಹೊರಟಳು. (ಮುಂದುವರಿಯುವುದು)
?ಕರೋಟಿರ ಶಶಿ ಸುಬ್ರಮಣಿ,
ವೀರಾಜಪೇಟೆ.