ಸೋಮವಾರಪೇಟೆ, ಫೆ.೬: ತೋಟದಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಯಂತ್ರ ತಾಗಿ ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ನೇಗಳ್ಳೆ ಗ್ರಾಮದಲ್ಲಿ ಸಂಭವಿಸಿದೆ.
ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಳೆ ಗ್ರಾಮ ನಿವಾಸಿ ಸೋಮಯ್ಯ ಹಾಗೂ ದೇವಕಿ ಅವರ ಪುತ್ರ ಪ್ರದೀಪ್ (೩೬) ಎಂಬವರೇ ಸಾವನ್ನಪ್ಪಿದವರಾಗಿದ್ದು, ಇಂದು ಬೆಳಿಗ್ಗೆ ನೇಗಳ್ಳೆ ಗ್ರಾಮದ ರಮೇಶ್ ಎಂಬವರಿಗೆ ಸೇರಿದ ತೋಟದೊಳಗೆ ಘಟನೆ ನಡೆದಿದೆ.
ಜೆಸಿಬಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಅವಘಡ ಸಂಭವಿಸಿದ್ದು, ಪ್ರದೀಪ್ ಅವರ ತಲೆ, ಭುಜದ ಭಾಗಕ್ಕೆ ಗಂಭೀರ ಪೆಟ್ಟಾಗಿ ಅಸುನೀಗಿದ್ದಾರೆ. ಜೆಸಿಬಿ ಚಾಲಕನ ವಿರುದ್ದ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಪ್ರದೀಪ್ ಅವರು ಪೋಷಕರು ಸೇರಿದಂತೆ ಪತ್ನಿ ಸೌಮ್ಯ ಹಾಗೂ ೩ ವರ್ಷದ ಪುತ್ರನನ್ನು ಅಗಲಿದ್ದಾರೆ.