ಕುಶಾಲನಗರ, ಫೆ. ೬: ಕುಶಾಲನಗರ ಸಮೀಪದ ಕೊಪ್ಪ ಬಳಿ ಹೆದ್ದಾರಿಯಲ್ಲಿ ನಡೆದ ಬೈಕ್ ಅವಘಡದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಚಿಕ್ಕಕಮರವಳ್ಳಿ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಮಂಜುನಾಥ್ (೨೪) ಮೃತ ದುರ್ದೈವಿ. ಕುಶಾಲನಗರದ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಬೈಕ್ (ಕೆಎ.೧೨.ಜೆ.೪೬೩೩) ಸವಾರ ಮಂಜುನಾಥ್ ರಸ್ತೆಗುರುಳಿ ಲಾರಿಯೊಂದರ ಅಡಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಕೊನೆಯುಸಿರೆಳೆದಿ ದ್ದಾನೆ. ಮೃತ ಮಂಜುನಾಥ್ ಮಾದಾಪಟ್ಟಣದ ಮಾಂಡೊವಿ ಸಂಸ್ಥೆಯ ಉದ್ಯೋಗಿಯಾಗಿದ್ದು ಕೊಪ್ಪ ಸಮೀಪದ ಚಿಕ್ಕಕಮರವಳ್ಳಿ ನಿವಾಸಿಯಾಗಿದ್ದಾನೆ.

ಈ ಸಂಬAಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.