ಕುಶಾಲನಗರ, ಫೆ. ೬: ಕರ್ನಾಟಕ ರಾಜ್ಯ ಪಾನೀಯ ನಿಗಮ ಘಟಕದಲ್ಲಿ ಅವಧಿ ಮೀರಿದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು. ಅಬಕಾರಿ ಇಲಾಖೆಯ ಸೋಮವಾರಪೇಟೆ ತಾಲೂಕು ಉಪ ಅಧೀಕ್ಷಕಿ ಆರ್.ಎಂ. ಚೈತ್ರ ಅವರ ನೇತೃತ್ವದಲ್ಲಿ ಬಳಕೆಗೆ ಯೋಗ್ಯವಲ್ಲದ ಅವಧಿ ಮೀರಿದ ೧೧೭ ಬಾಕ್ಸ್ ಬಿಯರ್ ಮತ್ತು ೩೧ ಕೇಸ್ ವೈನ್ ಸೇರಿದಂತೆ ಅವಧಿ ಮೀರಿದ ಮದ್ಯವನ್ನು ಗುಂಡಿಗೆ ಸುರಿದು ನಾಶಪಡಿಸಲಾಯಿತು. ಘಟಕದ ಮೇಲುಸ್ತುವಾರಿ ಅಧಿಕಾರಿ ಸೋಮವಾರಪೇಟೆ ತಾಲೂಕು ಅಬಕಾರಿ ರಕ್ಷಕ ಮಹಾಂತೇಶ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಸಹಾಯಕ ಠಾಣಾಧಿಕಾರಿ ಕರಿಯಪ್ಪ, ಘಟಕದ ವ್ಯವಸ್ಥಾಪಕ ವಿಠಲ್ ಕದಂ ಮತ್ತು ಸಿಬ್ಬಂದಿಗಳು ಇದ್ದರು.