ಶನಿವಾರಸಂತೆ, ಫೆ. ೬: ಮನೆಗೆ ಅಪರಿಚತರು ಬಂದು ತೊಂದರೆ ಕೊಡುತ್ತಿದ್ದಾರೆ; ವಿರೋಧಿಗಳು ಬಂದು ತೊಂದರೆ ಕೊಡುತ್ತಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗುವುದನ್ನು ನಾವು ಕಂಡಿರುತ್ತೇವೆ. ಆದರೆ ಇಲ್ಲೊಬ್ಬರು ಪಕ್ಕದ ಮನೆಯ ನಾಯಿಯೊಂದು ನಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಗ್ರಾಮದ ನಿವಾಸಿ ಬಿ.ಎಸ್. ಜಗದೀಶ್ ಎಂಬವರು ತಮ್ಮ ಮನೆಯ ಬಾಗಿಲಿಗೆ ನೆರೆ ಮನೆಯ ಹರೀಶ್ ಎಂಬವರಿಗೆ ಸೇರಿದ ನಾಯಿ ಆಗಿಂದಾಗ್ಗೆ ಬರುತ್ತಿರುತ್ತದೆ. ಆದ್ದರಿಂದ ಹರೀಶ್ ಅವರನ್ನು ಠಾಣೆಗೆ ಕರೆಯಿಸಿ ನಾಯಿಯನ್ನು ಅವರ ಮನೆಯಲ್ಲೇ ಕಟ್ಟಿ ಹಾಕುವಂತೆ ಸೂಚಿಸಬೇಕಾಗಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.

-ನರೇಶ್