ಕೂಡಿಗೆ, ಫೆ. ೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರದ ಗ್ರಾಮದ ಚರಣ್ ಕುಮಾರ್ ಎಂಬವರಿಗೆ ಸೇರಿದ ಆಟೋ ಕೂಡಿಗೆ ಡೈರಿ ಮುಂಭಾಗದ ರಸ್ತೆಯ ತಿರುವಿನ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ ಚಾಲಕ ಚರಣ್ ಕುಮಾರ ಮತ್ತು ಆಟೋದಲ್ಲಿ ಕುಳ್ಳಿತ್ತಿದ್ದ ನಾರಾಯಣಪ್ಪ ಎಂಬವರಿಗೆ ತಲೆಗೆ ಗಾಯವಾದ ಪರಿಣಾಮವಾಗಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವಘಡ ನಡೆದ ಸಂದರ್ಭ ಸ್ಥಳೀಯ ಸಹಕಾರದಿಂದ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ಸಾಗಿಸಲಾಗಿದೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.