ಮಡಿಕೇರಿ, ಫೆ. ೫: ಭಾರತರತ್ನ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬAಧಿಸಿದAತೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಹಾಗೂ ಮಾರ್ಗಸೂಚಿಯಲ್ಲಿ ಕೇಂದ್ರ ಸರಕಾರವು ಈ ಕುರಿತು ಪ್ರಧಾನಮಂತ್ರಿಗಳೇ ರಾಷ್ಟçಪತಿಗೆ ನೇರವಾಗಿ ಶಿಫಾರಸು ಮಾಡಬೇಕಿದೆ ಎಂದಿರುವ ಕಾರಣದಿಂದಾಗಿ ರಾಜ್ಯ ಸರಕಾರ ದೇಶದ ಹೆಮ್ಮೆಯ ವೀರ ಸೇನಾನಿಗಳಾದ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಿಗೆ ಈ ಪ್ರಶಸ್ತಿ ನೀಡುವಂತೆ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ.ಭಾರತ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಹಾಗೂ ಮಾರ್ಗಸೂಚಿಯಲ್ಲಿ ಕೇಂದ್ರ ಸರಕಾರವು ‘‘ಖಿhe ಡಿeಛಿommeಟಿಜಚಿಣioಟಿ ಜಿoಡಿ ಃhಚಿಡಿಚಿಣh ಖಚಿಣhಟಿಚಿ ಚಿಡಿe mಚಿಜe bಥಿ ಣhe Pಡಿime ಒiಟಿisಣeಡಿ himseಟಜಿ ಣo ಣhe Pಡಿesiಜeಟಿಣ ಓo ಜಿoಡಿmಚಿಟ ಡಿeಛಿommeಟಿಜಚಿಣioಟಿs ಜಿoಡಿ ಣhis ಚಿಡಿe ಟಿeಛಿessಚಿಡಿಥಿ’’ ಎಂದು ಸೂಚಿಸಿರುತ್ತಾರೆ.ಈ ಹಿನ್ನೆಲೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮ ವಹಿಸಿರುವುದಿಲ್ಲ ಎಂಬುದಾಗಿ ಮಾಹಿತಿ ಒದಗಿಸಿದ್ದಾರೆ.