ಮಡಿಕೇರಿ, ಫೆ. ೫: ಕೊಡಗು ಜಿಲ್ಲೆಯಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ ೨೦೨೦ರಲ್ಲಿ ವಿವಿಧ ರೀತಿಯ ಅಪರಾಧಗಳಿಗೆ ಸಂಬAಧಿಸಿದAತೆ ಒಟ್ಟು ೧೮೩೬ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ೨೩೭ ಗಂಭೀರ ಪ್ರಕರಣಗಳಾಗಿದ್ದು, ೧೬೦೯ ಗಂಭೀರವಲ್ಲದ ಪ್ರಕರಣಗಳು ಸೇರಿವೆ. ಒಟ್ಟು ಮೊಕದ್ದಮೆಗಳ ಪೈಕಿ ೧೬೬೯ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ೧೬೭ ಪ್ರಕರಣಗಳು ಪತ್ತೆಗೆ ಬಾಕಿ ಇರುವುದಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದ್ದಾರೆ.

೨೦೧೮ರಲ್ಲಿ ೨೪೬೫ ಪ್ರಕರಣಗಳು ದಾಖಲಾಗಿ ಇದರಲ್ಲಿ ೨೩೨೧ ಪ್ರಕರಣ ಪತ್ತೆಯಾಗಿವೆ. ೧೪೪ ಪ್ರಕರಣ ಬಾಕಿ ಇದೆ. ೨೦೧೯ರಲ್ಲಿ ೨೦೧೧ ಪ್ರಕರಣಗಳಲ್ಲಿ ೨೬೮ ಪ್ರಕರಣ ಪತ್ತೆಯಾಗಬೇಕಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ. ಪತ್ತೆಯಾಗದಿರುವ ಪ್ರಕರಣಗಳಿಗೆ ಕಾರಣವನ್ನೂ ನೀಡಲಾಗಿದ್ದು, ಅದರ ವಿವರವನ್ನು ಒದಗಿಸಲಾಗಿದೆ. ಕೆಲವೊಂದು ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಹಾಗೂ ಕಳವು ಮಾಲು ಪತ್ತೆ ಹಚ್ಚಲು ಬಾಕಿ ಇದೆ. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಅಪಘಾತಪಡಿಸಿದ ವಾಹನ ಪತ್ತೆಗೆ ಬಾಕಿ ಇದೆ. ಇನ್ನಿತರ ಕೆಲವು ವಿಚಾರಗಳಿಗೆ ಸಂಬAಧಿಸಿದAತೆ ಎಫ್.ಎಸ್. ವರದಿ ಮತ್ತು ದಾಖಲಾತಿಗಳು ಸಿಗಲು ಬಾಕಿ ಇರುವುದರಿಂದ ಇದು ತನಿಖೆಯಲ್ಲಿವೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳು ಹೊರ ರಾಜ್ಯದವರಾಗಿದ್ದು, ಇವರ ವಿಳಾಸ ಸರಿಯಾಗಿ ಪತ್ತೆಯಾಗದ ಕಾರಣ ಬಾಕಿ ಉಳಿದಿರುವುದಾಗಿ ಸಚಿವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೨೦ ಪೊಲೀಸ್ ಠಾಣೆಗಳಿದ್ದು, ಖಾಲಿ ಹುದ್ದೆಯ ವಿವರವನ್ನು ಶಾಸಕರ ಪ್ರಶ್ನೆಯಂತೆ ನೀಡಲಾಗಿದ್ದು, ಕೈಗೊಂಡಿರುವ ಕ್ರಮವನ್ನು ವಿವರಿಸಲಾಗಿದೆ. ಪ್ರಸ್ತುತ ೮೦ ಗೃಹರಕ್ಷಕರನ್ನು ಕರ್ತವ್ಯಕ್ಕೆ ಉಪಯೋಗಿಸಿಕೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಲಾಗಿದೆ. ೨೦೧೯-೨೦ರಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಶೌಚಾಲಯ ದುರಸ್ತಿ ಕಾಮಗಾರಿಗೆ ರೂ. ೨.೫೫ ಲಕ್ಷ ಹಾಗೂ ೨೦೨೦-೨೧ರಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆ, ನಗರ ವೃತ್ತ ನಿರೀಕ್ಷಕರ ಕಚೇರಿ ಮತ್ತು ಕೊಡಗು ಮಹಿಳಾ ಪೊಲೀಸ್ ಠಾಣೆ ಕಟ್ಟಡ ಸಂಕೀರ್ಣ ದುರಸ್ತಿ ಹಾಗೂ ನವೀಕರಣಕ್ಕೆ ರೂ. ೧.೧೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕರ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದ್ದಾರೆ.