ಪಾಲಿಬೆಟ್ಟ, ಫೆ. ೫: ಸರ್ವಧರ್ಮದ ಭಾವೈಕ್ಯತೆಯ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್‌ಗೆ ಚಾಲನೆ ನೀಡಲಾಗಿದೆ.ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಜುಮಾ ನಮಾಜಿನ ನಂತರ ಕಾಲ್ನಡಿಗೆಯಲ್ಲಿ ದರ್ಗಾದವರೆಗೆ ಮೆರವಣಿಗೆಯಲ್ಲಿ ಸಾಗಿ ಶೇಷ ಪ್ರಾರ್ಥನೆಯೊಂದಿಗೆ ಕೇರಳದ ಧಾರ್ಮಿಕ ಪಂಡಿತ ಸಯ್ಯದಲಿ ಶಿಹಾಬುದ್ದೀನ್ ಅಲ್ ಹೈದ್ರೋಸಿ ಅಹ್ಸನಿ ಕಲ್ಲರಕ್ಕಲ್ ಅವರು ಧÀ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಎಂ. ಸೈನುದ್ದೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿ ಯಾಗಿರುವ ಮೊದಲ ಪುಟದಿಂದ) ಉರೂಸ್‌ಗೆ ಜಾತಿ ಮತ ಭೇದವಿಲ್ಲದೆ ಭಕ್ತಾದಿಗಳು ಭಾಗವಹಿಸುತ್ತಿದ್ದು ಉರೂಸ್ ಕೊನೆ ದಿನವಾದ ಫೆಬ್ರವರಿ ೮ರಂದು ೪ಗಂಟೆಯಿAದ ಎಲ್ಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾ ಗುತ್ತಿದೆ.
ಕೋವಿಡ್ ನಿಯಮ ಪಾಲನೆ ಮಾಡುವ ಮೂಲಕ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸ ಬೇಕೆಂದರು.ಈ ಸಂದರ್ಭ ಮಸೀದಿಯ ಖತೀಬ್ ಅಲಿ ಸಖಾಫಿ, ಪಾಲಿಬೆಟ್ಟ ಜಮಾಅತ್ ಕಾರ್ಯದರ್ಶಿ ಹನೀಫ್, ಖಾಲಿದ್, ಖಜಾಂಚಿ ಟಿ.ಕೆ. ಮುಸ್ತಫ,ಸಹ ಕಾರ್ಯದರ್ಶಿ ಸಮೀರ್, ಶೌಕತ್ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರು ಹಾಜರಿದ್ದರು. -ವರದಿ: ಪುತ್ತಂ ಪ್ರದೀಪ್