ಗೋಣಿಕೊಪ್ಪಲು, ಫೆ. ೫: ಕೃಷಿ ಇಲಾಖೆಯಿಂದ ರೈತರಿಗೆ ಸಹಾಯಧನದ ರೂಪದಲ್ಲಿ ದರದಲ್ಲಿ ಸಿಗಬೇಕಾದ ಟಾರ್ಪಲ್ ವಿತರಣೆಯಲ್ಲಿ ಅನ್ಯಾಯ, ಶಿಕ್ಷಣ ಇಲಾಖೆಯ ವಿದ್ಯಾಗಮ, ಅಬ್ಕಾರಿ ಇಲಾಖೆಯಲ್ಲಿ ಶೇ. ೧೦೦ ಸಾಧನೆ, ಫೆ. ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಿಕೆ, ಸರ್ವೆ ಇಲಾಖೆಯಲ್ಲಿ ಪ್ರಗತಿ ಸೇರಿದಂತೆ ಇನ್ನಿತರ ವಿಚಾರಗಳು ವೀರಾಜಪೇಟೆ ತಾ.ಪಂ. ಸಭೆಯಲ್ಲಿ ಪ್ರಸ್ತಾಪಗೊಂಡವು.ಪೊನ್ನAಪೇಟೆಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಪ್ರಮುಖವಾಗಿ ಕೃಷಿ ಇಲಾಖೆಯ ಮೇಲೆ ಸದಸ್ಯರು ಚರ್ಚೆ ಆರಂಭಿಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದಾಗ ರೈತರಿಗೆ ಕೃಷಿ ಚಟುವಟಿಕೆಗೆ ಅವಶ್ಯವಿರುವ ಟಾರ್ಪಲ್ ವಿತರಣೆಯಲ್ಲಿ ಇಲಾಖೆಯ ಅಧಿಕಾರಿಗಳು ವಿಳಂಬಧೋರಣೆ ನಡೆಸುವ ಮೂಲಕ ರೈತರಿಗೆ ಟಾರ್ಪಲ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿಲ್ಲ. ತಾ.ಪಂ. ಸದಸ್ಯರಿಗೆ ಮೂವರು ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆ ಇಲಾಖಾ ಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಸದಸ್ಯರು ಶಿಫಾರಸ್ಸು ಪತ್ರ ನೀಡಿದಾಗ ಫಲಾನುಭವಿಗಳಿಗೆ ಟಾರ್ಪಲ್ ವಿತರಣೆಯಾಗಿಲ್ಲ. ಬೆಳಗಾಗುವುದರೊಳಗೆ ಬಂದ ಟಾರ್ಪಲ್‌ಗಳು ಎಲ್ಲಿ ಹೋದವು ಎಂದು ಪಾಲಿಬೆಟ್ಟ ಕ್ಷೇತ್ರದ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಪ್ರಸ್ತಾಪಿಸಿದರು. ಈ ಪ್ರಶ್ನೆಗೆ ಸದಸ್ಯರೆಲ್ಲರೂ ಒಕ್ಕೂರಲಿನಿಂದ ಧ್ವನಿಗೂಡಿಸಿ (ಮೊದಲ ಪುಟದಿಂದ) ಯಾರಿಗೂ ಕೂಡ ಟಾರ್ಪಲ್ ವಿತರಣೆಯಾಗಿಲ್ಲ. ಈ ಬಗ್ಗೆ ಸಮಗ್ರ ಉತ್ತರ ನೀಡುವಂತೆ ಕೃಷಿ ಅಧಿಕಾರಿ ಶಿವಮೂರ್ತಿಯವರಿಗೆ ಒತ್ತಾಯಿಸಿ ದರು. ಇದಕ್ಕೆ ಉತ್ತರಿಸಿದ ತಾಲೂಕಿನಲ್ಲಿ ೨೨ ಸಾವಿರ ರೈತರಿದ್ದಾರೆ. ಈ ಬಾರಿ ಕೇವಲ ೬೨೦ ಟಾರ್ಪಲ್‌ಗಳನ್ನು ಖರೀದಿಸಿ ರೈತರಿಗೆ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಜನಪ್ರತಿನಿಧಿಗಳು ಕಳುಹಿಸಿರುವ ಶಿಫಾರಸ್ಸಿಗೆ ಮಾನ್ಯತೆ ನೀಡಿದ್ದೇವೆ. ಬೇಡಿಕೆ ಹೆಚ್ಚಿದ್ದ ಕಾರಣ ಒಂದೇ ದಿನದಲ್ಲಿ ಟಾರ್ಪಲ್‌ಗಳನ್ನು ವಿತರಿಸಲಾಗಿದೆ. ಕೆಲವು ಫಲಾನುಭ ವಿಗಳಿಗೆ ಟಾರ್ಪಲ್ ತಲುಪಿರುವುದಿಲ್ಲ. ಮುಂದಿನ ದಿನದಲ್ಲಿ ಕ್ರಮವಹಿಸುವು ದಾಗಿ ಹೇಳಿದರು.

ಶಿಕ್ಷಣ ಇಲಾಖೆಯ ಪ್ರಗತಿಯನ್ನು ವಿವರಿಸಿದ ಅಧಿಕಾರಿ ಉತ್ತಪ್ಪ ೬ ರಿಂದ ೮ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳು ನಡೆಯುತ್ತಿವೆ. ೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭ ವಾಗಿದೆ. ಸಮವಸ್ತç ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಿಗೆ ನೀರನ್ನು ಒದ ಗಿಸಲು ಜಲ್‌ಜೀವನ್ ಮಿಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪAಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದ ಎಇಇ ಮಹಾದೇವ್ ಮಾತನಾಡಿ, ತಾಲೂಕಿನಲ್ಲಿ ರಸ್ತೆ ಕಾಮಗಾರಿಗಳು ಶೇ. ೬೦ ಭಾಗ ಪೂರ್ಣಗೊಂಡಿದೆ. (ಮೊದಲ ಪುಟದಿಂದ) ಯಾರಿಗೂ ಕೂಡ ಟಾರ್ಪಲ್ ವಿತರಣೆಯಾಗಿಲ್ಲ. ಈ ಬಗ್ಗೆ ಸಮಗ್ರ ಉತ್ತರ ನೀಡುವಂತೆ ಕೃಷಿ ಅಧಿಕಾರಿ ಶಿವಮೂರ್ತಿಯವರಿಗೆ ಒತ್ತಾಯಿಸಿ ದರು. ಇದಕ್ಕೆ ಉತ್ತರಿಸಿದ ತಾಲೂಕಿನಲ್ಲಿ ೨೨ ಸಾವಿರ ರೈತರಿದ್ದಾರೆ. ಈ ಬಾರಿ ಕೇವಲ ೬೨೦ ಟಾರ್ಪಲ್‌ಗಳನ್ನು ಖರೀದಿಸಿ ರೈತರಿಗೆ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಜನಪ್ರತಿನಿಧಿಗಳು ಕಳುಹಿಸಿರುವ ಶಿಫಾರಸ್ಸಿಗೆ ಮಾನ್ಯತೆ ನೀಡಿದ್ದೇವೆ. ಬೇಡಿಕೆ ಹೆಚ್ಚಿದ್ದ ಕಾರಣ ಒಂದೇ ದಿನದಲ್ಲಿ ಟಾರ್ಪಲ್‌ಗಳನ್ನು ವಿತರಿಸಲಾಗಿದೆ. ಕೆಲವು ಫಲಾನುಭ ವಿಗಳಿಗೆ ಟಾರ್ಪಲ್ ತಲುಪಿರುವುದಿಲ್ಲ. ಮುಂದಿನ ದಿನದಲ್ಲಿ ಕ್ರಮವಹಿಸುವು ದಾಗಿ ಹೇಳಿದರು.

ಶಿಕ್ಷಣ ಇಲಾಖೆಯ ಪ್ರಗತಿಯನ್ನು ವಿವರಿಸಿದ ಅಧಿಕಾರಿ ಉತ್ತಪ್ಪ ೬ ರಿಂದ ೮ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳು ನಡೆಯುತ್ತಿವೆ. ೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭ ವಾಗಿದೆ. ಸಮವಸ್ತç ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಿಗೆ ನೀರನ್ನು ಒದ ಗಿಸಲು ಜಲ್‌ಜೀವನ್ ಮಿಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪAಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದ ಎಇಇ ಮಹಾದೇವ್ ಮಾತನಾಡಿ, ತಾಲೂಕಿನಲ್ಲಿ ರಸ್ತೆ ಕಾಮಗಾರಿಗಳು ಶೇ. ೬೦ ಭಾಗ ಪೂರ್ಣಗೊಂಡಿದೆ. ತಿಳಿಸಿದರು.

ಪರಿಶಿಷ್ಟ ವರ್ಗದ ಜನರಿಗೆ ಸರಿಯಾದ ದಾಖಲೆಗಳು ಇಲ್ಲದೆ ಸವಲತ್ತು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಆಧಾರ್,ಮತದಾರರ ಚೀಟಿ ಮಾಡಿ ಕೊಡಲು ಕಂದಾಯ ಇಲಾಖೆ ಯೊಂದಿಗೆ ಲೈನ್ ಮನೆಗಳಿಗೆ ತೆರಳುತ್ತಿದ್ದೇವೆ. ವಂಚಿತಗೊAಡ ಅನೇಕ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಸಮಗ್ರವಾಗಿ ಎಲ್ಲರಿಗೂ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದರು. ಪಡಿತರ ಚೀಟಿದಾರರು ತಮ್ಮ ಪಾಲಿನ ಪಡಿತರವನ್ನು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತೆಗೆದುಕೊಳ್ಳುವ ಅವಕಾಶವಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ನಿರಂತರವಾಗಿ ಗೈರಾಗುತ್ತಿರುವ ಬಗ್ಗೆ ಉಪಾಧ್ಯಕ್ಷ ಚಲನ್ ಕುಮಾರ್ ಗಮನ ಸೆಳೆದರು. ಇಲಾಖೆಯಲ್ಲಿ ಸಿಬ್ಬಂದಿಗಳೊAದಿಗೆ ಉತ್ತಮ ಒಡನಾಟವಿಲ್ಲದೆ. ಅಧಿಕಾರಿ ತಮಗೆ ಇಷ್ಟ ಬಂದAತೆ ನಡೆದುಕೊಳ್ಳುತಿ ್ತದ್ದಾರೆ.ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ದಾರಿ ಹಿಡಿದಿದ್ದಾರೆ. ವರ್ಷಕ್ಕೆ ಕೇವಲ ೯ ತಿಂಗಳು ಮಾತ್ರ ಆಹಾರ ಪದಾರ್ಥ ವನ್ನು ಮಕ್ಕಳಿಗೆ ವಿತರಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿವೆ. ಅಧಿಕಾರಿ ಸಭೆಗೆ ಬಾರದಿರುವುದು ಸರಿಯಲ್ಲ ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ಇಒ ಅವರಿಗೆ ಸೂಚಿಸಿದರು. ಈ ಸಂದರ್ಭ ಸಹಾಯಕ ಅಧಿಕಾರಿ ಉತ್ತರಿಸುತ್ತ ಅಧಿಕಾರಿಗೆ ಬಿಪಿ ಅಧಿಕವಿರುವುದರಿಂದ ಸಭೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಮಜಾಯಿಸಿಕೆ ನೀಡಿದರು. ಇವರ ಉತ್ತರಕ್ಕೆ ಅಸಮಾಧಾನಗೊಂಡ ನೆಲ್ಲೀರ ಚಲನ್ ಕುಮಾರ್ ಅಧಿಕಾರಿಗೆ ಅನಾರೋಗ್ಯವಿದ್ದಲ್ಲಿ ರಜೆಯ ಮೇಲೆ ತೆರಳಲಿ, ಇಲಾಖೆಯ ಸಂಬAಧಿಸಿ ಯಾವುದೇ ಕಡತಕ್ಕೂ ಸಹಿ ಮಾಡದಂತೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸರ್ವೆ, ಆರೋಗ್ಯ, ಮೀನುಗಾರಿಕೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಪ್ರಗತಿಯ ಬಗ್ಗೆ ಅಧಿಕಾರಿಗಳು ವರದಿ ನೀಡಿದರು. ತಾ.ಪಂ.ನ ಸದಸ್ಯರು ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿ ಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

-ಹೆಚ್.ಕೆ.ಜಗದೀಶ್