ಮಡಿಕೇರಿ, ಜ. ೨೭: ಕೊಂಡAಗೇರಿ ರಸ್ತೆಯ ಐಕೊಳ ಬಳಿ ಇಂದು ಅಪರಾಹ್ನ ನಿಂತಿದ್ದ ಸ್ಕೂಟರ್‌ವೊಂದಕ್ಕೆ ಕಾರೊಂದು ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಮಗುಚಿಕೊಂಡಿರುವ ಘಟನೆ ಸಂಭವಿಸಿದೆ.

ಎA. ಕಿರಣ್ ಅವರು ರಸ್ತೆ ಬದಿಯಲ್ಲಿ ತಮ್ಮ ಸ್ಕೂಟರ್ ನಿಲ್ಲಿಸಿ ಯಾರೊಂದಿಗೋ ಮಾತನಾಡುತ್ತಿದ್ದ ಸಂದರ್ಭ ಕೊಂಡAಗೇರಿಯ ಐಮದೆ ಎಂಬವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ. ಇದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ಚಕ್ರ ಮೇಲಾಗಿ ಮಗುಚಿಕೊಂಡಿತ್ತು. ಕಿರಣ್ ಸೇರಿದಂತೆ ಕಾರಿನಲ್ಲಿದ್ದ ಐಮದೆ ಹಾಗೂ ಇತರ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.