ಮಡಿಕೇರಿ, ಜ. ೨೭ : ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ತಾ. ೨೯ ರಂದು ರಸ್ತೆ ತಡೆ ಪ್ರತಿಭಟನೆ ನಡೆಸಲು ತಾಳತ್ತಮನೆಯ ನೇತಾಜಿ ಯುವಕ ಮಂಡಲ ನಿರ್ಧರಿಸಿದೆ. ಶೀಘ್ರ ರಸ್ತೆ ಕಾಮಗಾರಿ ಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧೧ ಗಂಟೆಯವರೆಗೆ ತಾಳತ್ತಮನೆಯ ಮೇಕೇರಿ, ಮೂರ್ನಾಡು ಬೈಪಾಸ್ ರಸ್ತೆಯ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವು ದೆಂದು ಅಧ್ಯಕ್ಷ ಬಿ.ಬಿ. ಸುದೀಪ್ ರೈ, ಕಾರ್ಯದರ್ಶಿ ಯತೀಶ್ ರೈ ತಿಳಿಸಿದ್ದಾರೆ.