ಜಿಲ್ಲಾ ಸಂಯೋಜಕರಾಗಿ ವಿಲ್‌ಫ್ರೆಡ್ ಕ್ರಾಸ್ತ ನೇಮಕ
ಮಡಿಕೇರಿ, ಜ. ೨೮: ರಾಷ್ಟಿçÃಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆ.ಜೆ.ವಿ.ಎಸ್.) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ವಿಜ್ಞಾನ ದಿನಾಚರಣೆ ಮತ್ತು ಸ್ಪರ್ಧೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಸಂತ ಮೈಕಲರ ಶಾಲೆಯ ಶಿಕ್ಷಕ ವಿಲ್‌ಫ್ರೆಡ್ ಕ್ರಾಸ್ತ ಅವರನ್ನು ಜಿಲ್ಲಾ ಸಂಯೋಜಕರನ್ನಾಗಿ ಸಮಿತಿ ನೇಮಕ ಮಾಡಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಲು ಫೆ. ೧೦ ಕೊನೆಯ ದಿನ. ಆಸಕ್ತ ವಿದ್ಯಾರ್ಥಿಗಳು ಸಂಯೋಜಕರ ಮೊ. ೯೪೪೮೭೭೩೦೭೮ ನ್ನು ಸಂಪರ್ಕಿಸಬಹುದಾಗಿದೆ. ಫೆ. ೧೪ಕ್ಕೆ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರು ಫೆ. ೨೧ ರಂದು ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಬಹುಮಾನ-ಪ್ರಮಾಣ ಪತ್ರ ವಿತರಣಾ ಸಮಾರಂಭ ಫೆ. ೨೮ ರಂದು ನಡೆಯಲಿದೆ ಎಂದು ಜ್ಞಾನ ವಿಜ್ಞಾನ ಸಮಿತಿ ತಿಳಿಸಿದೆ.