ಕೂಡಿಗೆ, ಜ ೨೮ : ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕರೆ ಸಮೀಪ ಸರ್ವೆ ನಂಬರ್ ೨೫/೧ರ ೧೪ ಎಕರೆ ಸಿ ಆ್ಯಂಡ್ ಡಿ ಪ್ರದೇಶದಲ್ಲಿ ವಿದ್ಯುತ್ ಕಂಬ ಅಳವಡಿಕೆಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮದ ನಿವೇಶನ ರಹಿತರು ಮೊದಲು ನಿವೇಶನವನ್ನು ನೀಡಿ ನಂತರ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಆಗ್ರಹಿಸಿದರು.
ವಿದ್ಯುತ್ ಇಲಾಖೆ ಅಧಿಕಾರಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಸ್ಥಳ ವೀಕ್ಷಣೆಗೆ ಆಗಮಿಸಿದ ಸಂದರ್ಭ ಗ್ರಾಮದ ನೂರಾರು ನಿವೇಶನ ರಹಿತರು ವಿರೋಧಿಸಿದರು. ನಿವೇಶನವನ್ನು ಹಂಚುವ ಮೊದಲ ವಿದ್ಯುತ್ ಕಂಬ ಅಳವಡಿಸಬಹುದು ಎಂದು ಇಂಜಿನಿಯರ್ ಮಾಹಿತಿ ನೀಡಿದರು.
ಕಳೆದ ಎರಡೂ ವರ್ಷಗಳ ಹಿಂದೆ ಮನೆ ನಿವೇಶನಕ್ಕಾಗಿ ಬೆಟ್ಟ ಪ್ರದೇಶದಲ್ಲಿ ಕಾಡು ಕಡಿದು ಸ್ಥಳ ಗುರುತು ಮಾಡಿದವರನ್ನು ಕಂದಾಯ ಇಲಾಖೆಯವರು ತೆರವುಗೊಳಿಸಿ ಯಾರು ಪ್ರವೇಶ ಮಾಡಬಾರದು ಎಂದ ಜಾಗದಲ್ಲಿ ಸೌಭಾಗ್ಯ ಯೋಜನೆಯ ಅಡಿಯಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಮುಂದಾಗಿರುವ ಕ್ರಮವನ್ನು ಸಾರ್ವಜನಿಕರು ವಿರೋಧಿಸಿದರು.
ಕುಶಾಲನಗರ ಕಂದಾಯ ಇಲಾಖೆಯ ಪರಿವೀಕ್ಷಕÀ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ ಸೇರಿದಂತೆ ವಿದ್ಯುತ್ ಇಲಾಖೆಯ ಇಂಜಿನಿಯರ್ ಸ್ಧಳ ಪರಿಶೀಲನೆ ನಡೆಸಿ ಈ ಜಾಗವು ಸಿ ಎನ್ ಡಿ ಲ್ಯಾಂಡ್ ಆಗಿರುವುದರಿಂದ ಯಾವುದೇ ನಿವೇಶನ ಬಳಕೆಗೆ ಅವಕಾಶ ಇಲ್ಲ ಮುಂದಿನ ಆದೇಶದಂತೆ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ನಿವೇಶನ ರಹಿತರಾದ ಕಾಳಪ್ಪ, ಕಿರಣ, ಅನಂದ್, ರಾಮಣ್ಣ , ಶಿವಣ್ಣೇಗೌಡ, ಚಂದ,್ರ ರವಿ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.