ಮುಂದಿನ ಫೆ.೧ ರಿಂದ ೬ನೇ ತರಗತಿಯಿಂದ ಮೊದಲ ಪಿಯುಸಿ ತರಗತಿ ಆರಂಭಿಸಲು ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದು, ಆರೋಗ್ಯ ಸಚಿವರ ಜೊತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಚರ್ಚೆಯ ಆಧಾರದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಫೆ. ೧ ರಿಂದ ೧೦, ೧೨ನೇ ತರಗತಿಗೆ ಸಂಬAಧಿಸಿದAತೆ ಹಾಗೂ
೯, ೧೧ನೇ ತರಗತಿಗಳು ಪೂರ್ಣ ದಿನ ನಡೆಯಲಿವೆ.
೬ ರಿಂದ ೮ನೇ ತರಗತಿಗಳಿಗೆ ಸಂಬAಧಿಸಿದAತೆ ವಿದ್ಯಾಗಮ ಮುಂದುವರೆಯಲಿವೆ.
(ಮೊದಲ ಪುಟದಿಂದ) ಮುಂದಿನ ತಿಂಗಳಲ್ಲಿ ತಾಂತ್ರಿಕ ಸಲಹಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಉಳಿದ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಆಫ್ಲೈನ್, ಆನ್ಲೈನ್ ಆಯ್ಕೆ ಮುಂದುವರೆಯಲಿದೆ. ಹಾಜರಾತಿ ಕಡ್ಡಾಯವಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ
ಜೂ. ೧೪ ರಿಂದ ೨೫ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.
೧೪ರಂದು ಪ್ರಥಮ ಭಾಷೆ, ೧೬ ಗಣಿತ ಪರೀಕ್ಷೆ, ೧೮ರಂದು ಇಂಗ್ಲೀಷ್ ಹಾಗೂ ಕನ್ನಡ, ೨೧ರಂದು ವಿಜ್ಞಾನ, ೨೩ರಂದು ಹಿಂದಿ ಹಾಗೂ ೨೫ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇದು ತಾತ್ಕಾಲಿಕ ಪರೀಕ್ಷಾ ವೇಳಾ ಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ, ಪೋಷಕರಿಗೆ ಆಕ್ಷೇಪಗಳಿದ್ದರೆ ತಿಳಿಸುವಂತೆ ೧೫ ದಿನಗಳ ಕಾಲಾವಕಾಶ ನೀಡಲಾಗಿದೆ ಎಂಬುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.