ಸೋಮವಾರಪೇಟೆ,ಜ.೨೮: ಜಿಲ್ಲೆಯ ಗಡಿ ಭಾಗದಲ್ಲಿ ಕಾಡಾನೆ ಧಾಳಿ ನಡೆಸಿದ ಪರಿಣಾಮ ಹಾಸನ ಜಿಲ್ಲೆಯ ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಬಾಣಾವರ ಅರಣ್ಯ ಚೆಕ್ಪೋಸ್ಟ್ನ ೩೦೦ ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸೋಮವಾರಪೇಟೆ,ಜ.೨೮: ಜಿಲ್ಲೆಯ ಗಡಿ ಭಾಗದಲ್ಲಿ ಕಾಡಾನೆ ಧಾಳಿ ನಡೆಸಿದ ಪರಿಣಾಮ ಹಾಸನ ಜಿಲ್ಲೆಯ ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.ಬಾಣಾವರ ಅರಣ್ಯ ಚೆಕ್ಪೋಸ್ಟ್ನ ೩೦೦ ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ರೇವಣ್ಣ ಸೇರಿದಂತೆ ಇತರ ಮೂವರು ನಿನ್ನೆ ದಿನ ಬಾಣಾವರ ವ್ಯಾಪ್ತಿಯಲ್ಲಿ ಕೂಲಿ ಕೆಲಸ ಮುಗಿಸಿ ರಾತ್ರಿ ೧೦ ಗಂಟೆ ಸುಮಾರಿಗೆ ಎರಡು ಬೈಕ್ನಲ್ಲಿ ಚಿಕ್ಕಬೊಮ್ಮನಹಳ್ಳಿಗೆ ತೆರಳುತ್ತಿದ್ದರು. (ಮೊದಲ ಪುಟದಿಂದ) ಬಾಣಾವರ ಅರಣ್ಯ ಚೆಕ್ಪೋಸ್ಟ್ನಿಂದ ೩೦೦ ಮೀಟರ್ ದೂರಕ್ಕೆ ತೆರಳುತ್ತಿದ್ದಂತೆ ರಸ್ತೆ ಮಧ್ಯೆ ಕಾಡಾನೆ ಕಂಡುಬAದಿದೆ.
ಈ ಸಂದರ್ಭ ಗಾಬರಿಗೊಂಡ ಬೈಕ್ ಚಾಲಕ ದಿನೇಶ್ ಅವರು, ಬೈಕ್ನ್ನು ರಸ್ತೆಯಲ್ಲೇ ಅಡ್ಡ ಮಲಗಿಸಿದ್ದಾರೆ. ನಂತರ ಈರ್ವರೂ ಸಮೀಪದ ಹೊಲದೊಳಗೆ ಓಡಿದ್ದಾರೆ. ಬೈಕ್ನ ಶಬ್ದದಿಂದ ಗಾಬರಿಗೊಂಡ ಕಾಡಾನೆಯೂ ಸಹ ಹೊಲದೊಳಗೆ ತೆರಳಿದ್ದು, ಈ ಸಂದರ್ಭ ರೇವಣ್ಣ ಅವರು ಕಾಡಾನೆಯ ಎದುರಿಗೆ ಸಿಕ್ಕಿದ್ದರ ಪರಿಣಾಮ ಧಾಳಿ ನಡೆಸಿದೆ.ಕಾಡಾನೆಯ ಧಾಳಿಗೆ ಸಿಲುಕಿದ ರೇವಣ್ಣ ಅವರು ಸ್ಥಳದಲ್ಲೇ ಅಸುನೀಗಿದ್ದು, ಸ್ಥಳಕ್ಕೆ ಸೋಮವಾರಪೇಟೆ ಆರ್ಎಫ್ಓ ಸುಮಂತ್, ಬಾಣಾವರ ವ್ಯಾಪ್ತಿಯ ಡಿಆರ್ಎಫ್ಓ ಪುನೀತ್ ಹಾಗೂ ಸಿಬ್ಬಂದಿಗಳು, ಅರಕಲಗೂಡಿನ ಆರ್ಎಫ್ಓ ಅರುಣ್ಕುಮಾರ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮೃತ ರೇವಣ್ಣ ಅವರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಾಣಾವರ, ಸಿದ್ಧಲಿಂಗಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಸಾರ್ವಜನಿಕರು ಬೆಳಿಗ್ಗೆ ಹಾಗೂ ಸಂಜೆಯ ವೇಳೆ ರಸ್ತೆಯಲ್ಲಿ ತೆರಳುವಾಗ ಎಚ್ಚರಿಕೆ ವಹಿಸಬೇಕಿದೆ. ಇದರೊಂದಿಗೆ ಅರಣ್ಯ ಇಲಾಖೆಯಿಂದಲೂ ರಸ್ತೆ ಬದಿಯಲ್ಲಿ ವೈಜ್ಞಾನಿಕವಾಗಿ ಆನೆ ಕಂದಕ, ಸೋಲಾರ್ ಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ.
ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಸ್ಥಳೀಯರು, ಸಾರ್ವಜನಿಕರು ಹೈರಾಣಾಗಿದ್ದಾರೆ. ಕೃಷಿ ಪ್ರದೇಶಕ್ಕೂ ಲಗ್ಗೆಯಿಡುವ ಕಾಡಾನೆಗಳು ಮನಸೋಯಿಚ್ಛೆ ದಾಂಧಲೆ ನಡೆಸಿ, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ಇದರೊಂದಿಗೆ ಸಾರ್ವಜನಿಕರ ಮೇಲೂ ಧಾಳಿ ನಡೆಸುತ್ತಿರುವ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಸಂಘರ್ಷವನ್ನು ಕೊನೆಗಾಣಿಸಬೇಕೆಂದು ಬಾಣಾವರ ವ್ಯಾಪ್ತಿಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.