*ಗೋಣಿಕೊಪ್ಪಲು, ಜ. ೨೮: ನಿಡುಗುಂಬ ಗ್ರಾಮದಿಂದ ಕಾನೂರಿಗೆ ಸಂಚರಿಸಲು ಸುಮಾರು ೧೨ ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಬೇಕಾಗಿದ್ದ ಗ್ರಾಮಸ್ಥರ ಸಮಸ್ಯೆ ಬಗೆಹರಿದಿದೆ.
ಶಾಸಕರ ವಿಶೇಷ ಅನುದಾನದ ೭೦ ಲಕ್ಷ ರೂಪಾಯಿಗಳಲ್ಲಿ ಕಾನೂರು, ನಿಡುಗುಂಬ ರಸ್ತೆ ಅಭಿವೃದ್ಧಿ ಡಾಂಬರೀಕರಣ ನಡೆಯಲಿದ್ದು, ನಿಡುಗುಂಬ ಗ್ರಾಮದಿಂದ ಕೇವಲ ೩ ಕಿ.ಮೀ. ಸಂಚಾರ ವ್ಯವಸ್ಥೆಯಲ್ಲಿ ಕಾನೂರು ಗ್ರಾಮವನ್ನು ತಲುಪಬಹುದಾಗಿದೆ.
ಈ ಹಿಂದೆ ನಿಡುಗುಂಬ ಗ್ರಾಮಸ್ಥರು ಕೊಟ್ಟಗೇರಿ ಮೂಲಕ ಕಾನೂರು ತಲುಪಬೇಕಾಗಿತ್ತು. ಇದೀಗ ನಿಡುಗುಂಬದಿAದ ನೇರವಾಗಿ ೩ ಕಿ.ಮೀ. ವ್ಯಾಪ್ತಿಯಲ್ಲಿ ಕಾನೂರು ತಲುಪಬಹುದಾಗಿದ್ದು, ಸಮಯದ ಉಳಿತಾಯ ಮತ್ತು ಕೃಷಿ ಚಟುವಟಿಕೆಗಳಿಗೆ ವ್ಯವಸ್ಥಿತವಾಗಿ ರಸ್ತೆ ನಿರ್ಮಾಣವಾಗುತ್ತಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ನಿಡುಗುಂಬ ರಸ್ತೆ *ಗೋಣಿಕೊಪ್ಪಲು, ಜ. ೨೮: ನಿಡುಗುಂಬ ಗ್ರಾಮದಿಂದ ಕಾನೂರಿಗೆ ಸಂಚರಿಸಲು ಸುಮಾರು ೧೨ ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಬೇಕಾಗಿದ್ದ ಗ್ರಾಮಸ್ಥರ ಸಮಸ್ಯೆ ಬಗೆಹರಿದಿದೆ.
ಶಾಸಕರ ವಿಶೇಷ ಅನುದಾನದ ೭೦ ಲಕ್ಷ ರೂಪಾಯಿಗಳಲ್ಲಿ ಕಾನೂರು, ನಿಡುಗುಂಬ ರಸ್ತೆ ಅಭಿವೃದ್ಧಿ ಡಾಂಬರೀಕರಣ ನಡೆಯಲಿದ್ದು, ನಿಡುಗುಂಬ ಗ್ರಾಮದಿಂದ ಕೇವಲ ೩ ಕಿ.ಮೀ. ಸಂಚಾರ ವ್ಯವಸ್ಥೆಯಲ್ಲಿ ಕಾನೂರು ಗ್ರಾಮವನ್ನು ತಲುಪಬಹುದಾಗಿದೆ.
ಈ ಹಿಂದೆ ನಿಡುಗುಂಬ ಗ್ರಾಮಸ್ಥರು ಕೊಟ್ಟಗೇರಿ ಮೂಲಕ ಕಾನೂರು ತಲುಪಬೇಕಾಗಿತ್ತು. ಇದೀಗ ನಿಡುಗುಂಬದಿAದ ನೇರವಾಗಿ ೩ ಕಿ.ಮೀ. ವ್ಯಾಪ್ತಿಯಲ್ಲಿ ಕಾನೂರು ತಲುಪಬಹುದಾಗಿದ್ದು, ಸಮಯದ ಉಳಿತಾಯ ಮತ್ತು ಕೃಷಿ ಚಟುವಟಿಕೆಗಳಿಗೆ ವ್ಯವಸ್ಥಿತವಾಗಿ ರಸ್ತೆ ನಿರ್ಮಾಣವಾಗುತ್ತಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ನಿಡುಗುಂಬ ರಸ್ತೆ ಸುಬ್ಬಯ್ಯ, ಬಾಳೆಲೆ ವಿ.ಎಸ್.ಎಸ್. ಎನ್. ಬ್ಯಾಂಕ್ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣಗಣಪತಿ, ಆರ್.ಎಂ.ಸಿ. ಸದಸ್ಯ ಮಾಚಂಗಡ ಸುಜಾಪೂಣಚ್ಚ, ಆದೇಂಗಡ ವಿನುಚಂಗಪ್ಪ, ಬಾಳೆಲೆ ವಿಜಯಲಕ್ಷಿ÷್ಮ ಪದವಿಪೂರ್ವ ಕಾಲೇಜು ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕೊಟ್ಟಗೇರಿ ಬೂತ್ ಅಧ್ಯಕ್ಷ ಅಳಮೇಂಗಡ ಮೋಹನ್ ಚಂಗಪ್ಪ, ಕೃಷಿ ಮೋರ್ಚಾ ಅಧ್ಯಕ್ಷ ಮಾಚಂಗಡ ಅಶೋಕ್, ಇಂಜಿನಿಯರ್ಗಳಾದ ಸುರೇಶ್, ಮಹಾದೇವ್, ಸಣ್ಣ ನೀರಾವರಿ ಇಂಜಿನಿಯರ್ ರಫೀಕ್, ಗುತ್ತಿಗೆದಾರರ ದೀನ್ದಯಾಳ್, ಕಾನೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಅಳಮೇಂಗಡ ವಿವೇಕ್, ಪ್ರಮುಖರಾದ ಕಾಡ್ಯಮಾಡ ಭರತ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮದು ದೇವಯ್ಯ ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
-ಎನ್.ಎನ್. ದಿನೇಶ್