ಗೋಣಿಕೊಪ್ಪ, ಜ. ೨೮: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಮೈಸೂರು ನ್ಯಾಷನಲ್ ಇನ್ಸಿ÷್ಟಟ್ಯೂಟ್‌ನ (ಎನ್‌ಐಇ) ಇಂಜಿನಿಯರಿAಗ್ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಚೆಪ್ಪುಡೀರ ಅಕ್ಷತಾ ಬೋಪಣ್ಣ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಸಮಾರಂಭದಲ್ಲಿ ಕುಲಪತಿ ಡಾ. ಜಿ. ಹೇಮಂತ್‌ಕುಮಾರ್, ಪ್ರಾಂಶುಪಾಲ ಕೆ. ರಘುವೀರ್ ಅವರಿಂದ ಪದಕ ಸ್ವೀಕರಿಸಿದರು. ಇವರು ನೊಕ್ಯ ಗ್ರಾಮದ ಚೆಪ್ಪುಡೀರ ರಂಜನ್ ಬೋಪಣ್ಣ, ಆರತಿ ಬೋಪಣ್ಣ ಅವರ ಪುತ್ರಿ.