ಸುಂಟಿಕೊಪ್ಪ, ಜ. ೨೭: ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕಾಂಡನಕೊಲ್ಲಿಯ ಸಿ.ಸಿ.ಸುರೇಶ ಎಂಬವರು ತಾ.೨೧ ರಂದು ಮೋಟಾರ್ಬೈಕ್ನಲ್ಲಿ ಮನೆಯಿಂದ ಹೊರಗೆ ಹೋದವರು ಇನ್ನೂ ಮನೆಗೆ ತಲುಪಿಲ್ಲ ಎಂದು ಸುರೇಶ ಅವರ ಪತ್ನಿ ಶಾಂತ ಅವರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿ.ಸಿ. ಸುರೇಶ ಅವರಿಗೆ ೪೦ ವರ್ಷ ಪ್ರಾಯವಾಗಿದ್ದು, ಎಲೆಕ್ಟಿçÃಷಿಯನ್ ಕೆಲಸ ನಿರ್ವಹಿಸುತ್ತಿ ದ್ದರು. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಇಲಾಖೆಗೆ ತಿಳಿಸಲು ಪ್ರಕಟಣೆ ಕೋರಿದೆ.