ಮಡಿಕೇರಿ, ಜ.೨೭ : ಮಡಿಕೇರಿ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ೩೦ ತಿಂಗಳ ಮೊದಲ ಅವಧಿಗೆ ಮೀಸಲಾತಿ ನಿಗದಿಪಡಿಸುವ ಸಭೆಯು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಗ್ರಾ.ಪಂ.ಗಳ ನೂತನ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು. ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ತಹಶೀಲ್ದಾರ್ ಮಹೇಶ್, ಇತರರು ಇದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರು ಮೀಸಲಾತಿ ಪಟ್ಟಿ ಸಂಬAಧಿಸಿದAತೆ ಮಾಹಿತಿ ನೀಡಿದರು. ಮಡಿಕೇರಿ ತಾಲೂಕಿನಲ್ಲಿ ವಿವಿಧ ಗ್ರಾ.ಪಂ.ಗಳಲ್ಲಿ ೧೯೯೩ ರಿಂದ ೨೦೧೫ ರವರೆಗೆ ೮ ಅವಧಿಯಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮೀಸಲಾತಿ ಬಗ್ಗೆ ಮಾಹಿತಿ ನೀಡಿದರು.
ಬಳಿಕ ತಾಲೂಕಿನ ಒಟ್ಟು ೨೬ ಗ್ರಾ.ಪಂ.ಗಳಲ್ಲಿ ಪರಿಶಿಷ್ಟ ಜಾತಿ ೨, ಇದರಲ್ಲಿ ಸಾಮಾನ್ಯ ೧ ಮತ್ತು ಸಾಮಾನ್ಯ ಮಹಿಳೆ ೧, ಪರಿಶಿಷ್ಟ ಪಂಗಡ ೧, ಪ್ರವರ್ಗ (ಎ)-೭, ಪ್ರವರ್ಗ(ಬಿ)-೨, ಸಾಮಾನ್ಯ-೧೪ ಮೀಸಲಾತಿಯನ್ನು ಎನ್ಐಸಿ ತಂತ್ರಾAಶದ ಮೂಲಕ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಡಿಕೇರಿ ತಾಲೂಕಿನ ೨೬ ಗ್ರಾ.ಪಂ.ಗಳಿಗೆ ನಿಗದಿಯಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿವರ ಇಂತಿದೆ. ಗ್ರಾಮ ಪಂಚಾಯಿತಿ ಹೊಸಕೇರಿ- ಪ್ರವರ್ಗ (ಎ) ಅಧ್ಯಕ್ಷ, ಎಸ್ಸಿ (ಮಹಿಳೆ)-ಉಪಾಧ್ಯಕ್ಷೆ.
(ಮೊದಲ ಪುಟದಿಂದ) ಮೇಕೇರಿ-ಪ್ರವರ್ಗ(ಎ) ಅಧ್ಯಕ್ಷ, ಪ್ರವರ್ಗ (ಬಿ) ಉಪಾಧ್ಯಕ್ಷ, ಕೊಣಂಜಗೇರಿ (ಪಾರಾಣೆ) ಪ್ರವರ್ಗ(ಎ)-ಅಧ್ಯಕ್ಷ, ಸಾಮಾನ್ಯ (ಮಹಿಳೆ)-ಉಪಾಧ್ಯಕ್ಷೆ, ಕಾಂತೂರು ಮೂರ್ನಾಡು- ಪ್ರವರ್ಗ(ಎ) (ಮಹಿಳೆ) ಅಧ್ಯಕ್ಷೆ, ಪ್ರವರ್ಗ (ಬಿ) (ಮಹಿಳೆ)-ಉಪಾಧ್ಯಕ್ಷೆ, ಸಂಪಾಜೆ - ಪ್ರವರ್ಗ(ಎ) (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷ, ಚೆಂಬು-ಪ್ರವರ್ಗ (ಎ) (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷ, ಕುಂದಚೇರಿ ಗ್ರಾ.ಪಂ. ಪ್ರವರ್ಗ (ಎ) (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷ, ಮದೆ ಪ್ರವರ್ಗ (ಬಿ) - ಅಧ್ಯಕ್ಷ, ಎಸ್ಸಿ-ಉಪಾಧ್ಯಕ್ಷರು, ಭಾಗಮಂಡಲ ಪ್ರವರ್ಗ (ಬಿ) (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷ, ಮಕ್ಕಂದೂರು ಸಾಮಾನ್ಯ-ಅಧ್ಯಕ್ಷ, ಸಾಮಾನ್ಯ (ಮಹಿಳೆ) - ಉಪಾಧ್ಯಕ್ಷೆ, ಕಳಕೇರಿ ನಿಡುಗಣೆ ಸಾಮಾನ್ಯ-ಅಧ್ಯಕ್ಷ, ಸಾಮಾನ್ಯ (ಮಹಿಳೆ)-ಉಪಾಧ್ಯಕ್ಷೆ, ಕಡಗದಾಳು ಸಾಮಾನ್ಯ-ಅಧ್ಯಕ್ಷ, ಪ್ರವರ್ಗ (ಎ) (ಮಹಿಳೆ)-ಉಪಾಧ್ಯಕ್ಷೆ, ಬೆಟ್ಟಗೇರಿ ಸಾಮಾನ್ಯ-ಅಧ್ಯಕ್ಷ, ಪ್ರವರ್ಗ(ಎ)-ಉಪಾಧ್ಯಕ್ಷ, ಅಯ್ಯಂಗೇರಿ ಸಾಮಾನ್ಯ - ಅಧ್ಯಕ್ಷ, ಪ್ರವರ್ಗ(ಎ) (ಮಹಿಳೆ)-ಉಪಾಧ್ಯಕ್ಷೆ, ಬಲ್ಲಮಾವಟಿ ಸಾಮಾನ್ಯ-ಅಧ್ಯಕ್ಷ, ಸಾಮಾನ್ಯ (ಮಹಿಳೆ)-ಉಪಾಧ್ಯಕ್ಷೆ, ಕುಂಜಿಲ (ಕಕ್ಕಬ್ಬೆ) ಸಾಮಾನ್ಯ-ಅಧ್ಯಕ್ಷ, ಸಾಮಾನ್ಯ (ಮಹಿಳೆ)-ಉಪಾಧ್ಯಕ್ಷೆ, ನರಿಯಂದಡ ಸಾಮಾನ್ಯ-ಅಧ್ಯಕ್ಷ, ಪ್ರವರ್ಗ(ಎ) (ಮಹಿಳೆ)-ಉಪಾಧ್ಯಕ್ಷೆ, ಗಾಳಿಬೀಡು ಸಾಮಾನ್ಯ (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷರು, ಮರಗೋಡು ಸಾಮಾನ್ಯ (ಮಹಿಳೆ)-ಅಧ್ಯಕ್ಷೆ, ಪ್ರವರ್ಗ (ಎ) - ಉಪಾಧ್ಯಕ್ಷರು, ಹೊದ್ದೂರು ಸಾಮಾನ್ಯ (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ (ಮಹಿಳೆ)-ಉಪಾಧ್ಯಕ್ಷೆ, ಪೆರಾಜೆ ಸಾಮಾನ್ಯ (ಮಹಿಳೆ)-ಅಧ್ಯಕ್ಷೆ ಪ್ರವರ್ಗ(ಎ)-ಉಪಾಧ್ಯಕ್ಷ, ಕರಿಕೆ ಸಾಮಾನ್ಯ (ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷರು, ಎಮ್ಮೆಮಾಡು ಸಾಮಾನ್ಯ (ಮಹಿಳೆ)-ಅಧ್ಯಕ್ಷೆ, ಎಸ್ಟಿ (ಮಹಿಳೆ) - ಉಪಾಧ್ಯಕ್ಷೆ, ಬೇಂಗೂರು ಚೇರಂಬಾಣೆ ಎಸ್ಸಿ-ಅಧ್ಯಕ್ಷ, ಪ್ರವರ್ಗ (ಎ) (ಮಹಿಳೆ) - ಉಪಾಧ್ಯಕ್ಷರು, ನಾಪೋಕ್ಲು ಎಸ್ಸಿ(ಮಹಿಳೆ)-ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷರು, ಹಾಕತ್ತೂರು ಎಸ್ಟಿ (ಮಹಿಳೆ) ಅಧ್ಯಕ್ಷೆ, ಸಾಮಾನ್ಯ-ಉಪಾಧ್ಯಕ್ಷರು.