ಮಡಿಕೇರಿ, ಜ. ೨೮: ರಾಜ್ಯ ಸರಕಾರದ ಸೂಚನೆಯಂತೆ ಪ್ರತಿ ಜಿಲ್ಲೆಯಲ್ಲೊಂದರAತೆ ಕೋವಿಡ್ ಕುರಿತು ಸಮಗ್ರ ಮಾಹಿತಿ ಸಂಗ್ರಹ ಸಂಬAಧ ‘ಕೋವಿಡ್ ವಾರ್ ರೂಮ್’ ಸ್ಥಾಪನೆಯಾಗಬೇಕಿದ್ದು, ಈ ಸಂಬAಧ ಜಿಲ್ಲೆಯಲ್ಲಿ ಪ್ರತ್ಯೇಕ ಕಚೇರಿಯ ಉದ್ಘಾಟನೆ ನಿನ್ನೆ ನೆರವೇರಿತು. ಈ ಹಿಂದೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿಯಿಂದಲೇ ಕೋವಿಡ್ ಸಂಬAಧ ಎಲ್ಲಾ ಮಾಹಿತಿ ಸಂಗ್ರಹವಾಗುತ್ತಿತ್ತು. ಇದೀಗ ಈ ಕಚೇರಿಯ ಮೇಲ್ಭಾಗದಲ್ಲಿಯೇ ಇದ್ದ ಕೊಠಡಿಯನ್ನು ‘ಕೋವಿಡ್ ವಾರ್ ರೂಮ್’ ಆಗಿ ಮಾರ್ಪಡಿಸಿದ್ದು, ಸುಮಾರು ೧೦ ಮಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಕೋವಿಡ್ ವಾರ್ ರೂಮ್‌ಗೆ ಪ್ರತಿ ಜಿಲ್ಲೆಯಲ್ಲಿರುವ ಕೋವಿಡ್ ವಾರ್ ರೂಮ್‌ನಿಂದ ಸಂಗ್ರಹವಾದ ಮಾಹಿತಿ ರವಾನೆ ಯಾಗುತ್ತದೆ. ಈ ಮೂಲಕ ರಾಜ್ಯದ ಸಮಗ್ರ ಕೋವಿಡ್ ಮಾಹಿತಿ ಅಧಿಕೃತವಾಗಿ ಬಿಡುಗಡೆಗೊಳ್ಳುತ್ತದೆ.
ದ್ರವ ಮಾದರಿ, ಕ್ವಾರೆಂಟೈನ್, ಸೋಂಕಿತರ ಸಂಪರ್ಕ ಪತ್ತೆ, ಲಸಿಕೆ - ಈ ಎಲ್ಲದರ ಕುರಿತು ಮಾಹಿತಿ ಸಂಗ್ರಹ ಕೋವಿಡ್ ವಾರ್ ರೂಮ್‌ನಲ್ಲಿಯೇ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್‌ಗೆ ಸಂಬAಧಿಸಿ ದಂತೆ ಸಂಪೂರ್ಣ ಮಾಹಿತಿ ಕೋವಿಡ್ ವಾರ್ ರೂಮ್‌ನಲ್ಲಿಯೇ ದೊರಕುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು ೧೦ ಮಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಶಂಕಿತರಿAದ ಸಂಗ್ರಹವಾದ ದ್ರವ ಮಾದರಿಗಳನ್ನು ‘ಟ್ಯಾಗಿಂಗ್’, ‘ನಂಬರಿAಗ್’ ಮಾಡಿ ಗುರುತಿಸ ಲಾಗುತ್ತದೆ. ನಂತರ ಪರೀಕ್ಷೆಗೆಂದು ಲ್ಯಾಬ್‌ಗೆ ಕಳುಹಿಸಿಕೊಡಲಾಗುತ್ತದೆ. ಇಲ್ಲಿಂದ ಕೋವಿಡ್ ವರದಿ ಬಂದ ನಂತರ ಅದರ ಮಾಹಿತಿಯನ್ನು, ಅಂಕಿ ಅಂಶಗಳನ್ನು ಸಮಗ್ರವಾಗಿ ಸಂಗ್ರಹ ಮಾಡಲಾಗುತ್ತದೆ. ‘ಪಾಸಿಟಿವ್’ ವರದಿ ಬಂದ ವ್ಯಕ್ತಿಗಳನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ಕೂಡ ನೀಡಲಾಗುತ್ತದೆ. ಈ ಎಲ್ಲಾ ಕಾರ್ಯಗಳು ಜಿಲ್ಲೆಯ ‘ಕೋವಿಡ್ ವಾರ್ ರೂಮ್’ ನಿಂದಲೇ ನಿರ್ವಹಣೆಯಾಗುತ್ತದೆ.