ಮಡಿಕೇರಿ, ಜ. ೨೮: ಕೊಡಗು ಜಿಲ್ಲಾ ಮದನೀಸ್ ಅಸೋಸಿಯೇಷನ್‌ನ ಮಹಾ ಸಭೆಯು ನಗರದಲ್ಲಿ ಇತ್ತೀಚೆಗೆ ನಡೆಯಿತು. ಉಸ್ಮಾನ್ ಮದನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಸಾಲಿನ ನೂತನ ಆಡಳಿತ ಮಂಡಳಿಗೆ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಖತೀಬ್ ಅಬ್ದುಲ್, ಹಮೀದ್ ಮದನಿ ಕೊಳಕೇರಿ, ಕಾರ್ಯದರ್ಶಿಯಾಗಿ ಹನೀಫ್ ಮದನಿ ಕುಂಜಿಲ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ಲ ಮದನಿ ಇವರುಗಳು ಆಯ್ಕೆಗೊಂಡಿದ್ದಾರೆ. ಅಬೂಬಕರ್ ಸ್ವಾಗತಿಸಿ, ಹನೀಫ್ ವಂದಿಸಿದರು.