ಗೋಣಿಕೊಪ್ಪಲು, ಜ. ೨೮: ದೇಶ ಕಂಡ ಧೀಮಂತ ವ್ಯಕ್ತಿಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೊದಲ ಸಾಲಿನಲ್ಲಿದ್ದಾರೆ. ಇವರ ಹುಟ್ಟುಹಬ್ಬ ಆಚರಣೆ ಸಂತಸ ತಂದಿದೆ ಎಂದು ನಿವೃತ್ತ ಕರ್ನಲ್ ಚೆಪ್ಪುಡೀರ ತಮ್ಮಪ್ಪ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ, ಕಾವೇರಿ ಕಾಲೇಜು ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ೧೨೨ನೇ ಹುಟ್ಟುಹಬ್ಬ ಆಚರಣೆಯಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಗೆ ಪುಪ್ಪಾರ್ಚನೆ ಅರ್ಪಿಸಿ ಮಾತನಾಡಿದ ಅವರು ಕಾರ್ಯಪ್ಪನವರು ಈ ದೇಶಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು.
ಕೊಡವ ಸಾಹಿತ್ಯ ಆಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗಿನಲ್ಲಿ ಹುಟ್ಟಿದ ಕಾರ್ಯಪ್ಪ ಅವರು ವಿಶ್ವವಿಖ್ಯಾತರಾಗಿ ಹೆಸರು ಮಾಡಿದ್ದಾರೆ. ಶಿಸ್ತಿಗೆ ಹೆಸರಾಗಿದ್ದ ಇವರು ಭೂಸೇನೆ, ವಾಯುಸೇನೆ, ನೌಕಾಸೇನೆ ಈ ಮೂರು ವಿಭಾಗದ ಏಕೈಕ ಮುಖ್ಯಸ್ಥರಾಗಿ ಸೇವೆ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ಥಳಿಗೆ ಪುಪ್ಪಾರ್ಚನೆ ಅರ್ಪಿಸಿ ಮಾತನಾಡಿದ ಅವರು ಕಾರ್ಯಪ್ಪನವರು ಈ ದೇಶಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು.
ಕೊಡವ ಸಾಹಿತ್ಯ ಆಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗಿನಲ್ಲಿ ಹುಟ್ಟಿದ ಕಾರ್ಯಪ್ಪ ಅವರು ವಿಶ್ವವಿಖ್ಯಾತರಾಗಿ ಹೆಸರು ಮಾಡಿದ್ದಾರೆ. ಶಿಸ್ತಿಗೆ ಹೆಸರಾಗಿದ್ದ ಇವರು ಭೂಸೇನೆ, ವಾಯುಸೇನೆ, ನೌಕಾಸೇನೆ ಈ ಮೂರು ವಿಭಾಗದ ಏಕೈಕ ಮುಖ್ಯಸ್ಥರಾಗಿ ಸೇವೆ ಸಂಘಟನೆ ಅಧ್ಯಕ್ಷ ಕೊಕ್ಕಲೇರ ಮಂಜು ಚಿಣ್ಣಪ್ಪ, ಕಬ್ಬಚ್ಚಿರ ಸುಬ್ರಮಣಿ, ಕಳ್ಳಿಚಂಡ ರಾಬಿನ್, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಅಕಾಡೆಮಿಯ ನಿರ್ದೇಶಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಎನ್‌ಎಸ್‌ಎಸ್‌ನ ಲೆಫ್ಟಿನೆಂಟ್ ಐನಂಡ ಲೇಪಾಕ್ಷಿ, ಅಕ್ರಂ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ಅಕಾಡೆಮಿಯ ನಿರ್ದೇಶಕ, ಕಾರ್ಯಕ್ರಮದ ಸಂಚಾಲಕ ಪಡಿಜ್ಞರಂಡ ಪಿ. ಪ್ರಭುಕುಮಾರ್, ಸ್ವಾಗತಿಸಿದರು. ವಿದ್ಯಾರ್ಥಿ ವಸುಂಧರ ಭಾರ್ಗವ ಪ್ರಾರ್ಥಿಸಿ, ಅಕಾಡೆಮಿಯ ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ. ಗಿರೀಶ್ ವಂದಿಸಿದರು. ಕಾಲೇಜಿನ ಎನ್.ಸಿ.ಸಿ. ಕೆಡೆಟ್‌ಗಳು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಅಕಾಡೆಮಿ ನಿರ್ದೇಶಕರು, ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-ಹೆಚ್.ಕೆ.ಜಗದೀಶ್